ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು

ಸೋಷಿಯಲ್‌ ಮೀಡಿಯಾದಲ್ಲೀಗ (Social Media) ಮಾಡೆಲ್‌ಗಳು, ನಟಿಯರು ಬಿಕಿನಿ, ಹಾಟ್‌ ಉಡುಗೆಗಳನ್ನ ತೊಟ್ಟು ಫೋಟೋ ಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿಬಿಟ್ಟಿದೆ. ಅದರಂತೆ ಸದಾ ಹಾಟ್‌ ಬೆಡಗಿ ಅಂತಲೇ ಗುರುತಿಸಿಕೊಂಡಿರುವ ಮಾಡೆಲ್, ನಟಿ ಕಂ ಕಂಟೆಂಟ್ ಕ್ರಿಯೇಟರ್ ವೈಷ್ಣವಿ ಅಂಧಲೆ (Vaishnavi Andhale) ತಮ್ಮ ಗ್ಲಾಮರ್‌ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

ಅದಕ್ಕೆ ಲೇಟೆಸ್ಟ್ ಉದಾಹರಣೆ ಈ ಹೊಸ ಫೋಟೋಶೂಟ್‌ (Photoshoot) ಎನ್ನಬಹುದು. ರೆಸ್ಟೋರೆಂಟ್‌ವೊಂದರಲ್ಲಿ ಬಿಸಿ ಬಿಸಿ ಬಾರ್ಬಿಕ್ಯೂ ಜೊತೆಗೆ ಹಾಟ್ ಪೋಸ್ ನೀಡಿರುವ ವೈಷ್ಣವಿ ಪಡ್ಡೆ ಹೈಕಳ ಎದೆಬಡಿತ ಹೆಚ್ಚಿಸಿದ್ದಾರೆ. ಇದಕ್ಕೆ ʻನಮಗೆ ಪಿಜ್ಜಾ ಬಾರ್ಬಿಕ್ಯೂ ಇಲ್ವಾ.. ಆ ನೋಟ ನೋಡಿ, ಕೊಲ್ಲುವಂತೆ ಇದೆ.. ಈ ಫೋಟೋಗಳು ಮಾದಕವಾಗಿವೆ.. ನೀವು ತುಂಭಾ ಸುಂದರವಾಗಿ ಕಾಣ್ತಿದ್ದೀರಿʼ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ವಿಭಿನ್ನ ಕಲೆಗಳನ್ನ ಕರಗತ ಮಾಡಿಕೊಂಡಿರೋ ವೈಷ್ಣವಿ ನರ್ತಕಿ, ಗಾಯಕಿ ಮತ್ತು ವರ್ಣಚಿತ್ರಗಾರ್ತಿ, ವಿಡಿಯೋ ಹಾಗೂ ಫೋಟೋಗ್ರಫಿ ಮಾಡೋದ್ರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಕಂಟೆಂಟ್‌ ಕ್ರಿಯೇಟರ್‌ ಕೂಡ ಆಗಿರುವ ವೈಶು 2019 ರಲ್ಲಿ, ವೈಷ್ಣವಿ ಫೆಮಿನಾ ಮಿಸ್ ಇಂಡಿಯಾ ಮಹಾರಾಷ್ಟ್ರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಇವರ ಲಕ್ಕೇ ಬದಲಾಯ್ತು. ಅದಾದ ಬಳಿಕ ಮಾಡೆಲಿಂಗ್‌ ಜೊತೆಗೆ ಕಂಟೆಂಟ್‌ ಕ್ರಿಯೇಟ್‌, ಸಿನಿಮಾ, ಜಾಹೀರಾತು ಹಾಗೂ ಕಿರುಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.