ತುಮಕೂರು: ಸೋಮಣ್ಣನಂತವರು ನೂರು ಜನ ಬಂದರು ತುಮಕೂರು ಕ್ಷೇತ್ರವನ್ನ ಅಲುಗಾಡಿಸೋಕೆ ಆಗಲ್ಲ. ಬೇರು ಸಮೇತ ಕಿತ್ತು ಹಾಕ್ತಿವಿ ಎಂಬ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆಗೆ ಮಾಜಿ ಸಚಿವ ಸೋಮಣ್ಣ ಖಡಕ್ ತಿರುಗೇಟು ನೀಡಿದ್ದಾರೆ.
ಸಿದ್ದಗಂಗಾ ಮಠಕ್ಕೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಜೊತೆ ಬಂದಿದ್ದ ವಿ.ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ತಮ್ಮ ಬಗ್ಗೆ ಡಿಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮನ್ನ ಬೇರು ಸಮೇತ ಕಿತ್ತಾಕೋದು ಇರಲಿ ಪರಮೇಶ್ವರ್ ಅವರ ಬೇರೇ ಕಿತ್ತುಕೊಂಡು ಹೋಗಿದೆ. ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಅವರ ಪಕ್ಷದ ಗುರುತು ಇಲ್ಲ. ಅವರು ಕಳೆದು ಹೋಗಿದ್ದಾರೆ. ಪರಮೇಶ್ವರ್ ಡಾಕ್ಟರೆಟ್ ಮಾಡಿದ್ದಾರೆ. ದೇವೆಗೌಡರ ಸ್ಪರ್ಧೆಯಿಂದ ಯಾರಿಗೆ ಲಾಸ್ ಎಂದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಲೆಳೆದರು.

ಪರಮೇಶ್ವರ್, ಮುದ್ದಹನುಮೇಗೌಡರಿಗೆ, ರಾಜಣ್ಣರಿಗೆ ಎಚ್‍ಡಿಡಿ ಅವರು ತುಮಕೂರಿನಿಂದ ಸ್ಪರ್ಧಿಸಿದರೇ ಲಾಸ್ ಆಗುತ್ತೆ. ಡಾಕ್ಟರ್ ಹೇಳಿದ್ದನ್ನ ಸ್ವೀಕಾರ ಮಾಡುತ್ತೇವೆ. ಎಲ್ಲೆಡೆ ಮೋದಿಯ ಸುನಾಮಿ ಗಾಳಿ ಬೀಸುತ್ತಿದೆ ಎಂದು ಹೇಳಿದರು.

Leave a Reply