ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ

ಮೈಸೂರು: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟರು.

ವಸತಿ ಇಲಾಖೆಯಿಂದ ಒಂದೇ ಒಂದು ಮನೆ ಆಗಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಸತಿ ಇಲಾಖೆಯಿಂದ ಕಟ್ಟಿಸಿರುವ ಮನೆ ನೋಡಲು ಸಿದ್ದರಾಮಯ್ಯ ಅವರಿಗೆ ಬಹಿರಂಗ ಆಹ್ವಾನ ಕೊಟ್ಟರು. ನಾನು ಎಷ್ಟು ಮನೆ ಕಟ್ಟಿದ್ದೇನೆ ಎಂಬುದನ್ನ ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯ ಅವರಿಗೆ ತೋರಿಸಲು ನಾನು ಸಿದ್ಧ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

Siddaramaiah

ನಾನು ಏನೇನು ಅಭಿವೃದ್ಧಿ ಮಾಡಿದ್ದೇನೆ ಎಂದು ಅವರಿಗೆ ತೋರಿಸುತ್ತೇನೆ. ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರು ಪದೇ-ಪದೇ ಯಾಕೆ ಈ ಮಾತು ಹೇಳುತ್ತಿದ್ದಾರೆ ಅಂತಾ ಗೊತ್ತಿಲ್ಲ. ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಸತ್ತು ಹೋಗಿದೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀರುಗೇಟು ಕೊಟ್ಟ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಬಹಳ ಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ ಅವರ ಮಾತುಗಳಿಂದ ಅವರು ಯಾವ ರೀತಿಯ ಅನುಭವಸ್ಥರು ಎಂಬುದು ಗೊತ್ತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಯಿ ಅವರ ನೇತೃತ್ವದ ಸರ್ಕಾರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾ, ಉತ್ತಮ ಆಡಳಿತ ನೀಡುತ್ತಿದೆ. ಎಲ್ಲ ಆರೋಪಗಳಿಗೂ ಕಾಲವೇ ಉತ್ತರ ನೀಡಲಿದೆ ಎಂದರು. ಇದನ್ನೂ ಓದಿ:  ಪ್ರೇಯಸಿ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ 

Comments

Leave a Reply

Your email address will not be published. Required fields are marked *