ಮುಖ್ಯ ಆರ್ಥಿಕ ಸಲಹೆಗಾರರಾಗಿ ಅನಂತ ನಾಗೇಶ್ವರನ್ ನೇಮಕ

ನವದೆಹಲಿ: ಕೇಂದ್ರ ಸರ್ಕಾರ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಆರ್ಥಿಕ ತಜ್ಞ ವಿ.ಅನಂತ ನಾಗೇಶ್ವರನ್‌ ಅವರನ್ನು ಶುಕ್ರವಾರ ನೇಮಕ ಮಾಡಿದೆ.

ಫೆಬ್ರವರಿ 1 ರಂದು ಕೇಂದ್ರ ಬಜೆಟ್‌ ಮಂಡನೆ ಇದ್ದು, ಕೆಲವೇ ದಿನಗಳ ಮುಂಚಿತವಾಗಿ ಕೇಂದ್ರವು ನಾಗೇಶ್ವರನ್‌ರನ್ನು ನೇಮಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ನನ್ನ ಹೆಲಿಕಾಪ್ಟರ್ ತಡೆಯಲಾಗಿದೆ, ಇದು ಬಿಜೆಪಿ ಪಿತೂರಿ: ಅಖಿಲೇಶ್ ಯಾದವ್

ನಾಗೇಶ್ವರನ್‌ ಅವರು ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ಶಾಲೆಗಳು ಮತ್ತು ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ಗಳಲ್ಲಿ ಬೋಧನೆ ಮಾಡಿದ್ದಾರೆ. ಅಲ್ಲದೇ ಹಣಕಾಸು ಮತ್ತು ಆರ್ಥಿಕ ಪತ್ರಿಕೆಗಳಲ್ಲಿ ಲೇಖನ, ವಿಶ್ಲೇಷಣಾ ವರದಿಗಳನ್ನು ಬರೆದಿದ್ದಾರೆ.

ಇದಕ್ಕೂ ಮೊದಲು ಮುಖ್ಯ ಆರ್ಥಿಕ ತಜ್ಞರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಅ.8 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಸೇನಾ ವಿಮಾನ ಪತನ – ಅಪಾಯದಿಂದ ಪಾರಾದ ಪೈಲಟ್‌ಗಳು

Comments

Leave a Reply

Your email address will not be published. Required fields are marked *