ಲಕ್ನೋ: ಭಾರತದ ಶಿಕ್ಷಣದ ಗುಣಮಟ್ಟ ಯಾವ ರೀತಿಯಲ್ಲಿದೆ ಎಂಬುದಕ್ಕೆ ಉತ್ತರಪ್ರದೇಶದಲ್ಲಿರುವ ಸರ್ಕಾರಿ ಶಾಲೆಯೊಂದು ಸಾಕ್ಷಿಯಾಗಿದೆ.
ಹೌದು. ಇಲ್ಲಿನ ಸಿಕಂದರ್ ಪುರ್ ಸೌರಸಿ ಶಾಲೆಯೊಂದರಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿರುವ ಶಿಕ್ಷಕಿಗೆ ಒಂದು ವಾಕ್ಯ ಓದಲು ಬರದೇ ಪೇಚಿಗೆ ಸಿಲುಕಿದ್ದಾರೆ. ಅಲ್ಲದೆ ಶಾಲೆಯಿಂದಲೇ ಆಕೆಯನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಮ್ಯಾಜಿಸ್ಟೇಟ್ ದೇವೇಂದ್ರ ಕುಮಾರ್ ಪಾಂಡೆ ಶಾಲೆಗೆ ಏಕಾಏಕಿ ಭೇಟಿ ನೀಡಿದ್ದಾರೆ. ಶಿಕ್ಷಕಿ 8 ನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಈ ವೇಳೆ ತರಗತಿಗೆ ತೆರಳಿದ ದೇವೇಂದ್ರ ಕುಮಾರ್, ಶಿಕ್ಷಕಿ ಬಳಿ ಪುಸ್ತಕ ಕೊಟ್ಟು ಒಂದು ವಾಕ್ಯ ಓದುವಂತೆ ತಿಳಿಸಿದ್ದು, ಶಿಕ್ಷಕಿ ಓದಲು ತೊದಲಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಧಿಕಾರಿ ಕೂಡಲೇ ಆಕೆಯನ್ನು ಅಮಾನತು ಮಾಡುವಂತೆ ಸೂಚಿಸಿದರು.

ಶಿಕ್ಷಕಿಯನ್ನು ರಾಜ್ ಕುಮಾರಿ ಎಂದು ಗುರುತಿಸಲಾಗಿದೆ. ಈ ಶಿಕ್ಷಕಿಯ ಜಾಗಕ್ಕೆ ಬೇರೆ ಶಿಕ್ಷಕರನ್ನು ನೇಮಿಸುವಂತೆ ತಿಳಿಸಿದ್ದಾರೆ.
ಶಿಕ್ಷಕಿಗೆ ಓದಲು ಬರುವುದಿಲ್ಲವೆಂದು ಗೊತ್ತಾದ ಕೂಡಲೇ ಆಕೆಯನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಆಕೆಗೆ ಒಂದು ವಾಕ್ಯವೂ ಓದಲು ಬರವುದಿಲ್ಲ. ಇನ್ನು ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡುತ್ತಾಳೆ. ಆಕೆ ಶಿಕ್ಷಕಿ, ಆದ್ರೆ ಆಕೆಗೆಯೇ ಇಂಗ್ಲಿಷ್ ಓದಲು ಸಾಧ್ಯವಾಗುತ್ತಿಲ್ಲ. ನೀನು ಬಿಎ ಪಾಸ್ ಮಾಡಿದ್ಯಾ ಎಂದು ನಾನು ಆಕೆಯನ್ನು ಪ್ರಶ್ನಿಸಿದೆ. ಆಕೆಯ ಬಳಿ ಅರ್ಥ ಕೇಳಿಲ್ಲ. ಒಂದು ವಾಕ್ಯ ಓದೋದಕ್ಕೆ ಹೇಳಿದ್ದೆ ಅಷ್ಟೆ. ಅದು ಆಕೆಯಿಂದ ಸಾಧ್ಯವಾಗಿಲ್ಲ ಎಂದು ಪಾಂಡೆ ಹೇಳಿದ್ದಾರೆ.
https://twitter.com/ANINewsUP/status/1200634024588402697

Leave a Reply