– ವೈರಲ್ ಆಯ್ತು ತಾಯಿ ಮಗುವಿನ ಫೋಟೋ!
ಲಕ್ನೋ: ಉತ್ತರಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ಜೊತೆಗೆ ತನ್ನ ತಾಯ್ತನದ ಜವಾಬ್ದಾರಿಯನ್ನೂ ಸಹ ಮರೆಯದೆ ಎರಡರಲ್ಲೂ ನಿರತವಾಗಿ ಕೆಲಸಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಪೊಲೀಸರು, ಯೋಧರು ಹಾಗೂ ಇತರೆ ದೇಶಸೇವೆಯಲ್ಲಿ ತೊಡಗಿಕೊಂಡವರಿಗೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ಜನರ ರಕ್ಷಣೆ, ದೇಶ ಸೇವೆಯೇ ಮುಖ್ಯವಾಗಿರುತ್ತದೆ. ಇದಲ್ಲದೇ ಈ ವೃತ್ತಿಯಲ್ಲಿರುವ ಮಹಿಳೆಯರು ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಲ್ಲೂ ಹೆಚ್ಚು ಗಮನ ಹರಿಸಬೇಕಾಗಿರುತ್ತದೆ. ಗಂಡ, ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯು ಸಹ ಅವರಿಗೆ ಪ್ರಮುಖವಾಗಿರುತ್ತದೆ.
https://twitter.com/navsekera/status/1056036428474388480
ಉತ್ತರಪ್ರದೇಶದ ಇನ್ಸ್ ಪೆಕ್ಟರ್ ಜನರಲ್ ನವನೀತ್ ಸೆಕೆರಾ ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಕಚೇರಿಯ ಮಹಿಳಾ ಪೊಲೀಸ್ ಅಧಿಕಾರಿಯು ತನ್ನ ಕರ್ತವ್ಯದ ಜೊತೆಗೆ ತನ್ನ ಪಕ್ಕದಲ್ಲಿ ಅಂದಾಜು ಒಂದು ವರ್ಷದ ಮಗುವನ್ನು ಮಲಗಿಸಿಕೊಂಡು ಕರ್ತವ್ಯದಲ್ಲಿ ನಿರತರಾಗಿರುವ ಫೋಟೋವನ್ನು ಪ್ರಕಟಿಸಿದ್ದರು. ಈ ಫೋಟೋ ನೋಡಿದ ಜಾಲತಾಣಿಗರು ತಾಯಿಯ ಪ್ರೀತಿ ಹಾಗೂ ಅವರ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದ್ದಾರೆ.
ಸೆಕೆರಾ ಎಂಬವರು ತಮ್ಮ ಟ್ವಿಟ್ಟರಿನಲ್ಲಿ, ಇದೊಂದು ಅದ್ಭುತ, ಇದಕ್ಕೆ ಯಾವುದೇ ಬರಹವನ್ನು ಹಾಕುವ ಅಗತ್ಯವಿಲ್ಲ ಎಂದು ಬರೆದುಕೊಂಡು ಫೋಟೋವನ್ನು ಹಾಕಿಕೊಂಡಿದ್ದರು. ಒಬ್ಬ ತಾಯಿ ತನ್ನ ಕರ್ತವ್ಯದ ಸ್ಥಳದಲ್ಲಿಯೂ ಸಹ, ತಾಯಿ ಪ್ರೀತಿಯನ್ನು ಮಗುವಿಗೆ ನೀಡುವುದನ್ನು ಮರೆಯುವುದಿಲ್ಲ. ಮಹಿಳೆಯೊಬ್ಬಳಿದಂದಲೇ ಎರಡೂ ಕೆಲಸಗಳನ್ನು ನಿಭಾಯಿಸುವುದು ಸಾಧ್ಯ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply