ಆರೋಪಗಳ ಮಧ್ಯೆ ಐವೈಸಿ ಅಧ್ಯಕ್ಷ ಶ್ರೀನಿವಾಸ್‌ಗೆ ಹೊಸ ಜವಾಬ್ದಾರಿ

ನವದೆಹಲಿ: ಉತ್ತರಾಖಂಡ ವಿಧಾನಸಭೆ ಚುನಾವಣೆ ಹಿನ್ನೆಲೆ ರಚಿಸಲಾದ ಪ್ರಚಾರ ಸಮಿತಿಯಲ್ಲಿ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಗೆ ಅವಕಾಶ ನೀಡಿದೆ. ಶ್ರೀನಿವಾಸ್ ವಿರುದ್ಧ ಕೇಳಿ ಬಂದ ಹಲವು ಆರೋಪಗಳ ನಡುವೆ ಹೊಸ ಅವಕಾಶ ನೀಡುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸಿದೆ.

ಇಂದು ಕಾಂಗ್ರೆಸ್ ಮೂವತ್ತು ಜನರ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಆದಿಯಾಗಿ ಹಲವು ಹಿರಿಯ ನಾಯಕರಿದ್ದು, ಶ್ರೀನಿವಾಸ್‌ಗೆ ಅವಕಾಶ ನೀಡುವ ಉತ್ತರಾಖಂಡ ಚುನಾವಣೆಯಲ್ಲಿ ಪ್ರಚಾರದ ಜವಾಬ್ದಾರಿ ಹೊರಿಸಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‍ಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಯುವತಿ ಸಮಾಜವಾದಿ ಪಕ್ಷದ ಅಭ್ಯರ್ಥಿ

ಐವೈಸಿ ಅಧ್ಯಕ್ಷರಾಗಿರುವ ಶ್ರೀನಿವಾಸ್ ವಿರುದ್ಧ ಇತ್ತೀಚೆಗೆ ರಾಹುಲ್ ಗಾಂಧಿ ಅವರಿಗೆ ಇಮೇಲ್ ಮೂಲಕ ರಾಜ್ಯ ಯುವ ಕಾಂಗ್ರೆಸ್ ಸದಸ್ಯರೊಬ್ಬರು ದೂರು ನೀಡಿದ್ದರು. ಯೂಥ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಹಣ ಪಡೆದಿದ್ದಾರೆ. ಪದಾಧಿಕಾರಿಗಳ ನೇಮಕದಲ್ಲೂ ಹಣ ಪಡೆದಿದ್ದಾರೆ. ಏನು ಇಲ್ಲದ ಶ್ರೀನಿವಾಸ್ ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ದೂರು ನೀಡಿ ಇನ್ನು ಒಂದು ವಾರವೂ ಕಳೆದಿರಲಿಲ್ಲ. ಅಷ್ಟರಲ್ಲೇ ಶ್ರೀನಿವಾಸ್‌ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದ್ದು, ಶ್ರೀನಿವಾಸ್ ವಿರುದ್ಧ ನೀಡಿದ ದೂರನ್ನು ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಂತಾಗಿದೆ. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ಗೆ ನಮ್ಮ ಬೆಂಬಲ: ಮಮತಾ ಬ್ಯಾನರ್ಜಿ

Comments

Leave a Reply

Your email address will not be published. Required fields are marked *