ಗೇಮ್ ಆಡಲು ಫೋನ್‌ ನೀಡದ್ದಕ್ಕೆ ತಾಯಿಯನ್ನೇ ಕೊಂದು 2 ದಿನ ಶವವನ್ನು ಮನೆಯೊಳಗೆ ಬಚ್ಚಿಟ್ಟ

ಲಕ್ನೋ: ಗೇಮ್ ಆಡಲು ಮೊಬೈಲ್ ಕೊಡದಿದ್ದಕ್ಕೆ ತನ್ನ ತಾಯಿಯನ್ನೇ  ಗುಂಡಿಕ್ಕಿ ಕೊಂದು ಆಕೆಯ ದೇಹವನ್ನು ಎರಡು ದಿನಗಳ ಕಾಲ ಮನೆಯಲ್ಲಿ ಬಚ್ಚಿಟ್ಟಿದ್ದ ಕ್ರೂರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ 16 ವರ್ಷದ ಬಾಲಕ, ತಾಯಿ ಹಾಗೂ ಆತನ ಸಹೋದರಿ ವಾಸವಾಗಿದ್ದರು. ಬಾಲಕನ ತಂದೆ ಪಶ್ಚಿಮ ಬಂಗಾಳದಲ್ಲಿ ಸೇನಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದರು.

ಬಾಲಕನೊಬ್ಬನಿಗೆ ಗೇಮ್ ಆಡುವ ಚಟವಿತ್ತು. ಆದರೆ ಇದಕ್ಕೆ ತಾಯಿ ವಿರೋಧ ವ್ಯಕ್ತಪಡಿಸಿದ್ದಳು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಬಾಲಕನು ತನ್ನ ತಂದೆಯ ಪರಾವನಗಿಯಿದ್ದ ರಿವಾಲ್ವರ್‌ನಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮವಾಗಿ ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಬೆಚ್ಚಿ ಬೀಳಿಸಿದ ಮಹಿಳೆಯರ ಕೊಲೆ – ದೇಹವನ್ನು ತುಂಡರಿಸಿ ಕಾಲುವೆಗೆ ಎಸೆದ ಕಟುಕರು

ಅಷ್ಟೇ ಅಲ್ಲದೇ ಈ ವಿಷಯ ಯಾರಿಗೂ ತಿಳಿಯಬಾರದು ಎಂದು ತನ್ನ ತಾಯಿಯ ಶವವನ್ನು ಕೊಣೆಯೊಂದರಲ್ಲಿ ಬಚ್ಚಿಟ್ಟಿದ್ದಾನೆ. ತನ್ನ ತಂಗಿಗೂ ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ.

ಹೀಗೆ ಎರಡು ದಿನಗಳ ಕಾಲ ತಂಗಿಯ ಜೊತೆಗೆ ಆತ ತಾಯಿಯ ಶವವನ್ನು ಮನೆಯಲ್ಲಿ ಬಚ್ಚಿಟ್ಟುಕೊಂಡು ವಾಸವಾಗಿದ್ದ. ಅಷ್ಟೇ ಅಲ್ಲದೇ ಶವದಿಂದ ದುರ್ವಾಸನೆ ಬಾರದಿರಲಿ ಎಂದು ಆತ ಮನೆಯಲ್ಲಿ ರೂಮ್ ಫ್ರೆಶ್ನರ್ ಹಾಕಿದ್ದ. ಇದನ್ನೂ ಓದಿ: ಮತ್ತೆ ಶುರುವಾಯ್ತು ಜಹಾಗೀರ್‌ಪುರಿಯಲ್ಲಿ ಕಲ್ಲು ತೂರಾಟ – ವಾಹನಗಳು ಧ್ವಂಸ

ಆದರೆ ಕೊಳೆತ ದೇಹದ ವಾಸನೆ ಹೆಚ್ಚಾದಾಗ ತಂದೆಗೆ ತಾಯಿ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಎಲೆಕ್ಟ್ರಿಷಿಯನ್ ಒಬ್ಬ ಕೆಲಸಕ್ಕೆಂದು ಮನೆಗೆ ಬಂದಿದ್ದ. ಆ ವೇಳೆ ತಾಯಿಯನ್ನು ಕೊಲೆ ಮಾಡಿ ಹೋಗಿದ್ದಾನೆ ಎಂದು ಕಟ್ಟು ಕಥೆಯನ್ನು ಸೃಷ್ಟಿಸಿದ್ದಾನೆ.

ಘಟನೆ ಬಗ್ಗೆ ತಿಳಿದ ತಂದೆ ನೆರೆಹೊರೆಯವರಿಗೆ ತಿಳಿಸಿದ್ದು, ಕೂಡಲೇ ಪೊಲೀಸರಿಗೂ ತಿಳಿಸಿದ್ದಾರೆ. ಪೊಲೀಸರಿಗೂ ಆತ ಅದೇ ಕಥೆ ಹೇಳಿದ್ದಾನೆ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ನಿಜವಾದ ಸತ್ಯ ತಿಳಿದಿದ್ದು, ಬಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಹದಿಹರೆಯದ ಯುವಕ ತಪ್ಪೊಪ್ಪಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *