ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯ ಅಕ್ರಮ (KEA Exam Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‍ಪಿನ್ ಆರ್.ಡಿ ಪಾಟೀಲ್ (R.D Patil) ನಗರದಲ್ಲೇ ಅಡಗಿಕೊಂಡು ಮೊಬೈಲ್‍ನ್ನು ಬೇರೊಬ್ಬರ ಬಳಿ ಕೊಟ್ಟು ಉತ್ತರ ಪ್ರದೇಶಕ್ಕೆ ಕಳಿಸಿದ ವಿಚಾರ ಬೆಳಕಿಗೆ ಬಂದಿದೆ.

ಆರೋಪಿ ಕಲಬುರಗಿಯಲ್ಲೇ ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಕೂಡಲೇ ಆತನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆಗಾಗಲೇ ಆರೋಪಿ ತಪ್ಪಿಸಿಕೊಂಡಿದ್ದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ. ಮಹಾರಾಷ್ಟ್ರಕ್ಕೆ ಕರೆದುಕೊಂಡು ಬಿಟ್ಟ ಇಬ್ಬರು ಬಲಗೈ ಬಂಟರನ್ನು ಕಲಬುರಗಿಯ (Kalaburagi) ವಿಶ್ವವಿದ್ಯಾಲಯ ಪೊಲೀಸರು (Police) ಈಗ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆಯ ಫೇಕ್ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್

ಆರೋಪಿ ರವಿ ಊಕುಲಿ ಹಾಗೂ ಮತ್ತೋರ್ವನನ್ನು ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಆರ್.ಡಿ ಪಾಟೀಲ್‍ನನ್ನು ಸೊಲ್ಲಾಪುರದವರೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಮಹಾರಾಷ್ಟ್ರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಆರ್.ಡಿ ಪಾಟೀಲ್ ಅಡಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ