ಬೇರೆಯವರೊಂದಿಗೆ ಮದುವೆ ಆಗಿದ್ದಕ್ಕೆ ವಧುವನ್ನೇ ಕೊಂದ ಪ್ರೇಮಿ

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಈ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಅನಿಶ್ ಆರೋಪಿ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದ ಕಾಜಲ್‍ಳನ್ನು ಅನಿಶ್ ಗುಂಡಿಕ್ಕಿ ಕೊಂದಿದ್ದಾನೆ.

ಕಾಜಲ್ ಹಾಗೂ ಅನಿಶ್ ಇಬ್ಬರು ಇಷ್ಟಪಡುತ್ತಿದ್ದರು. ಜೊತೆಗೆ ಸಂಬಂಧವನ್ನು ಹೊಂದಿದ್ದರು. ಆದರೆ ಕಾಜಲ್ ಅನಿಶ್‍ನನ್ನು ಬಿಟ್ಟು ಬೇರೆಯೊಬ್ಬನೊಂದಿಗೆ ಮದುವೆಗಿದ್ದರಿಂದ ಆತ ಸಿಟ್ಟಿಗೆದ್ದನು. ನಂತರ ವಿವಾಹ ಸಮಾರಂಭ ನಡೆಯುವ ಸ್ಥಳಕ್ಕೆ ಬಂದು ಅನಿಶ್ ಆಕೆಯನ್ನು ಗುಂಡು ಹಾರಿಸಿದ್ದಾನೆ. ಕಾಜಲ್‍ನ ಎಡಗಣ್ಣಿನ ಬಳಿ ಗುಂಡು ತಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡಿನ ಸದ್ದು ಕೇಳಿದ ಕೂಡಲೇ ಸಮಾರಂಭದಲ್ಲಿ ನೆರದಿದ್ದ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಬಗ್ಗೆ ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಮಾತನಾಡಿ, ವಿವಾಹದ ನಂತರ ರಿಫ್ರೆಶ್ ಆಗಲು ಕೋಣೆಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಕೋಣೆಗೆ ಬಂದು ಕಾಜಲ್‍ಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!

ಈ ಘಟನೆಗೆ ಸಂಬಂಧಿಸಿ ಖುಬಿ ರಾಮ್ ಪ್ರಜಾಪತಿ ಮಾತನಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಥುರಾದಲ್ಲಿ ಎಸ್‍ಪಿ (ಗ್ರಾಮೀಣ) ಶ್ರೀಶ್ ಚಂದ್ರ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದೇವೆ. ಈ ಕುರಿತು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿರುವ ಬ್ರಿಟಿಷ್ ಪದ್ಧತಿ ಕೊನೆಯಾಗಬೇಕು: ನಿವೃತ್ತ ಪೊಲೀಸ್ ಸಂದೀಪ್

Comments

Leave a Reply

Your email address will not be published. Required fields are marked *