ಹಾವಿನ ತಲೆಯನ್ನ ಕಚ್ಚಿ, ಜಗಿದು ಉಗುಳಿದ ವ್ಯಕ್ತಿ!

ಲಕ್ನೋ: ತನಗೆ ಹಾವು ಕಚ್ಚಿತೆಂದು ವ್ಯಕ್ತಿಯೊಬ್ಬ ಅದರ ತಲೆಯನ್ನೇ ಕಚ್ಚಿ, ಜಗಿದು ನಂತರ ಉಗುಳಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಹಾರ್‍ದೊಯಿ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರದಂದು ಈ ಘಟನೆ ನಡೆದಿದ್ದು, ಸೋನೆಲಾಲ್ ಎಂಬಾತನೇ ಹಾವಿನ ತಲೆಯನ್ನ ಕಚ್ಚಿದ ವ್ಯಕ್ತಿ. ಸೋನೆಲಾಲ್ ತನ್ನ ಹಸುಗಳನ್ನು ಮೇಯಿಸುತ್ತಿರುವಾಗ ಆತನಿಗೆ ಹಾವು ಕಚ್ಚಿತ್ತು. ಇದರಿಂದ ಕೋಪಗೊಂಡ ಸೋನೆಲಾಲ್ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಅದರ ತಲೆಯನ್ನು ಬಾಯಿಂದ ಕಚ್ಚಿ, ಚೆನ್ನಾಗಿ ಜಗಿದು ಉಗುಳಿದ್ದಾನೆ.

ಹಾವು ಕಚ್ಚಿದ ಬಳಿಕ ಕೆಲವೇ ಕ್ಷಣಗಳಲ್ಲಿ ಸೋನೆಲಾಲ್ ಪ್ರಜ್ಞೆ ಕಳೆದುಕೊಂಡಿದ್ದಾನೆ. ಸ್ಥಳೀಯರು ಆತನನ್ನು ಮೋಘಗಂಜ್ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಸೋನೆಲಾಲ್ ಪ್ರಜ್ಞಾಹೀನನಾಗಿ ಬಿದ್ದ ಸ್ಥಳದಲ್ಲಿ ತಲೆ ಇಲ್ಲದ ಹಾವು ಬಿದ್ದಿದ್ದನ್ನು ಕಂಡು ಸ್ಥಳೀಯರೆಲ್ಲಾ ಆಶ್ಚರ್ಯಚಕಿತರಾಗಿದ್ರು.

ಸೋನೆಲಾಲ್ ಹಾವು ಕಚ್ಚಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ಹೇಳಿ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಸೋನೆಲಾಲ್ ಹಾವಿನ ವಿಷದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನ ದೇಹದಲ್ಲಿ ಹಾವು ಕಚ್ಚಿದ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂದು ಡಾ.ಮಹೇಂದ್ರ ವರ್ಮಾ ಸ್ಪಷ್ಟಪಡಿಸಿದ್ದಾರೆ.

ಸೋನೆಲಾಲ್ ನಡವಳಿಕೆ ವಿಚಿತ್ರವಾಗಿದ್ದು, ಹಾವಿನ ತಲೆಯನ್ನು ಕಚ್ಚಿ ಜಗಿಯುವುದು ಎಂದ್ರೆ ಸಾಮನ್ಯ ವಿಷಯವಲ್ಲ. ಸೋನೆಲಾಲ್ ಮಾದಕ ವ್ಯಸನಿಯಂತೆ ಕಾಣುತ್ತಾನೆ. ಡ್ರಗ್ಸ್ ಪ್ರಬಾವದಿಂದಲೇ ಹಾವನ್ನ ಕಚ್ಚಿರಬಹುದು ಎಂದು ಸ್ಟೇಟ್ ಮೆಂಟಲ್ ಹೆಲ್ತ್ ಸೊಸೈಟಿಯ ಕಾರ್ಯದರ್ಶಿ ಡಾ. ಎಸ್.ಸಿ.ತಿವಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *