ಓಡುತ್ತಾ ಬಂದು ನಾಮಪತ್ರ ಸಲ್ಲಿಸಿದ ಕ್ರೀಡಾ ಸಚಿವ – ವೀಡಿಯೋ ವೈರಲ್

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಓಡಿ ಬಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೀಡಿಯೋ ವೈರಲ್ ಆಗಿದೆ.

ಜಿಲ್ಲೆಯ ಫೆಫ್ನಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉತ್ತರಪ್ರದೇಶ ಚುನಾವಣೆಯಲ್ಲಿ ತಿವಾರಿ ಸ್ಪರ್ಧಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಅವರು ಬಲ್ಲಿಯಾ ಕಲೆಕ್ಟರೇಟ್‍ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತಿವಾರಿ ಕೇಸರಿ ಶಾಲು ಹಾಗೂ ಹಾರವನ್ನು ಧರಿಸಿ ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್‍ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.

ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆ.11 ಕೊನೆಯ ದಿನವಾಗಿದ್ದರೂ ಶುಕ್ರವಾರದ ಗಡುವನ್ನು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ನೀಡಲು ಅವರು ಬಯಸಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ. 10ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

Comments

Leave a Reply

Your email address will not be published. Required fields are marked *