ಮತದಾರರು ತಪ್ಪು ಮಾಡಿದರೆ ಯುಪಿ ಕಾಶ್ಮೀರ, ಕೇರಳವಾಗಬಹುದು: ಯೋಗಿ ಆದಿತ್ಯನಾಥ್

ಲಕ್ನೋ: ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳದಂತೆ ಆಗಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಚಿಸಿ ಮತದಾನ ಮಾಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದರು.

ಈ ಬಗ್ಗೆ ವೀಡಿಯೋ ಟ್ವೀಟ್ ಮಾಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಭಯ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಳೆದ ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವೇ ವರದಾನವಾಗಿದೆ. ನಿಮ್ಮ ಮತವೂ ನಿಮ್ಮ ಭಯಮುಕ್ತ ಬದುಕಿಗೆ ಎಂಬುದನ್ನು ನೀವೇ ಖಚಿತ ಪಡಿಸಿಕೊಳ್ಳಿ. ದೊಡ್ಡ ನಿರ್ಧಾರದ ಸಮಯ ಬಂದಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಪರ ಕೆಲಸಗಳು ನಡೆದಿವೆ. ಮತದಾರರು ಎಚ್ಚರ ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕ್ಷಣ ಮಾತ್ರದಲ್ಲಿ ಉತ್ತರಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲಿದೆ ಎಂದು ವೀಡಿಯೋದಲ್ಲಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸಮರ್ಪಣಾ ಮತ್ತು ಬದ್ಧತೆಯಿಂದ ಎಲ್ಲವನ್ನೂ ಮಾಡಿದೆ. ನೀವು ಎಲ್ಲವನ್ನೂ ನೋಡಿದ್ದೀರಿ ಮತ್ತು ಎಲ್ಲವನ್ನೂ ವಿವರವಾಗಿ ಕೇಳಿದ್ದೀರಿ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

ಉತ್ತರ ಪ್ರದೇಶ ಚುನಾವಣೆ ಇಂದಿನಿಂದ ಮೊದಲನೇ ಹಂತದ ಮತದಾನ ಪ್ರಾರಂಭವಾಗಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಅಧಿಕಾರವನ್ನು ಮುಂದುವರೆಸಲು ಪ್ರಯತ್ನ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಅವರಿಗೆ ಪ್ರಬಲ ಎದುರಾಳಿ ಪಕ್ಷವಾಗಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

Comments

Leave a Reply

Your email address will not be published. Required fields are marked *