ಸೇಡಿಗಾಗಿ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮಗನನ್ನೇ ಅಪಹರಿಸಿ ಕೊಂದ್ರು

crime

ಲಕ್ನೋ: ದ್ವೇಷಕ್ಕಾಗಿ ವಜಾಗೊಂಡಿದ್ದ ಸಿಬ್ಬಂದಿ ವೈದ್ಯರೊಬ್ಬರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನಿಜಾಮ್ ಮತ್ತು ಶಾಹಿದ್ ಬಂಧಿತ ಆರೋಪಿಗಳು. ಉತ್ತರಪ್ರದೇಶದ ಬುಲಂದ್‍ಶಹರ್‍ನಲ್ಲಿ ವೈದ್ಯರೊಬ್ಬರು ನೋಂದಣಿಯಾಗದ ಕ್ಲಿನಿಕ್‍ನ್ನು ನಡೆಸುತ್ತಿದ್ದರು. ನಿಜಾಮ್ ಹಾಗೂ ಶಾಹಿದ್ ಇದೇ ಕ್ಲಿನಿಕ್‍ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಪ್ಪಿನಿಂದಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಇದರಿಂದ ಈ ಸಿಬ್ಬಂದಿ ವೈದ್ಯರ ಮೇಲೆ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದರು. ಅದರಲ್ಲೂ ಕ್ಲಿನಿಕ್ ಚೆನ್ನಾಗಿ ನಡೆಯುತ್ತಿರುವುದನ್ನು ನೋಡಿ ನಿಜಾಮ್ ಮತ್ತು ಶಾಹಿದ್ ಅವರ ಕೋಪ ಇನ್ನೂ ಹೆಚ್ಚಿತ್ತು. ಇದರಿಂದಾಗಿ ವೈದ್ಯನ ಮಗನನ್ನು ಅಪಹರಿಸಿದ್ದಾರೆ.

ಇತ್ತ ಎಂಟು ವರ್ಷದ ಮಗ ಮನೆಗೆ ಬಾರದಿದ್ದರಿಂದ ಶುಕ್ರವಾರ ಅಪಹರಣದ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳು ಬಾಲಕನಿಗಾಗಿ ಹುಡುಕಾಟ ಆರಂಭಿಸಿವೆ.  ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸುಮಾರು 60 ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕತ್ತು ಹಿಸುಕಿ ಮಗುವಿನ ಬಾಯಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

Comments

Leave a Reply

Your email address will not be published. Required fields are marked *