ಲಕ್ನೋ: ಪೊಲೀಸರು ತಮ್ಮ ವೈಯಕ್ತಿಯ ಜೀವನದಿಂದ ದೂರವಿದ್ದು, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಈಗ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪೊಲೀಸ್ ಕಾನ್ಸ್ ಟೇಬಲ್ ಸೋಮ್ ಸಿಂಗ್ ಎಂಬವರು ರಜೆಗಾಗಿ ಬರೆದ ಪತ್ರ ವೈರಲ್ ಆಗಿದೆ. ಸೋಮ್‍ಸಿಂಗ್ ತಮ್ಮ ವೈಯಕ್ತಿಕ ಜೀವನದಿಂದ ದೂರು ಇದ್ದು ಮರಳಿ ಕುಟುಂಬಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರು. ಆದ್ದರಿಂದ ಅವರು ಒಂದು ತಿಂಗಳ ರಜೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಅವರು ರಜೆಗಾಗಿ ಉಲ್ಲೇಖಿಸಿದ ಕಾರಣ ಅವರ ಅರ್ಜಿಯಲ್ಲಿ ಎಲ್ಲರ ಗಮನ ಸೆಳೆದಿದ್ದು, ಆ ಪತ್ರವೀಗ ವೈರಲ್ ಆಗಿದೆ.

ಸೋಮ್ ಸಿಂಗ್ ಅವರು ಪತ್ರದಲ್ಲಿ `ಕುಟುಂಬ ವಿಸ್ತರಿಸಲು’ ಮತ್ತು ನನ್ನ ಕುಟುಂದವರ ಜೊತೆ ಕೆಲ ಕಾಲ ಸಮಯ ಕಳೆಯಬೇಕು ಆದ್ದರಿಂದ ನನಗೆ 30 ರಜೆ ಬೇಕು ಎಂದು ಉಲ್ಲೇಖಿಸಿದ್ದಾರೆ. ಸಿಂಗ್ ಅವರು ಜೂನ್ 23 ರಿಂದ ರಜೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಇವರ ರಜೆ ಅರ್ಜಿಯನ್ನು ನೋಡಿದ ಅಧಿಕಾರಿಗಳು ಸಿಂಗ್ ಅವರಿಗೆ ಬೇರೆ ಕಾರಣ ಕೊಟ್ಟು ಮನವಿ ಮಾಡುವಂತೆ ಹೇಳಿದ್ದಾರೆ. ಆದರೆ ಸಿಂಗ್ ಇದನ್ನು ಒಪ್ಪದೇ ಅದೇ ಕಾರಣ ನೀಡಿದ್ದಾರೆ.
ಅಧಿಕಾರಿಗಳು ಸಿಂಗ್ ಅವರಿಗೆ ಜೂನ್ 23 ರಿಂದ 45 ದಿನಗಳ ರಜೆ ನೀಡಿದ್ದಾರೆ. ಅಂದರೆ ಸೋಮ್ ಸಿಂಗ್ 30 ದಿನ ರಜೆ ಕೇಳಿದರೆ ಅಧಿಕಾರಿಗಳು 10 ದಿನ ಅಧಿಕವಾಗಿ ಸೇರಿಸಿ ಒಟ್ಟು 45 ದಿನಗಳ ರಜೆಗೆ ಸಹಿ ಹಾಕಿದ್ದಾರೆ.

Leave a Reply