ಬೆಂಗಳೂರು: ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಯೂ ಆಟಗಾರರ ಫಿಟ್ನೆಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಟೀಂ ಇಂಡಿಯಾ ಆಟಗಾರರು ತಮ್ಮ ದೇಹದ ಫಿಟ್ನೆಸ್ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸದ್ಯ ಈ ಪಟ್ಟಿಗೆ ಕನ್ನಡಿಗ ರಾಬಿನ್ ಉತ್ತಪ್ಪ ಸೇರ್ಪಡೆಯಾಗಿದ್ದಾರೆ.
ಹೌದು, ಸದ್ಯ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರಿತ್ ಬುಮ್ರಾ ಉತ್ತಮ ಫಿಟ್ನೆಸ್ ಹೊಂದಿದ್ದಾರೆ. ಪ್ರಸ್ತುತ ರಾಬಿನ್ ಉತ್ತಪ್ಪ ಸಹ ತಮ್ಮ ಹಳೆಯ ಫೋಟೋದೊಂದಿಗೆ ಸಿಕ್ಸ್ ಪ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಮುಂಬರುವ 11 ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಬಿನ್ ಸಿಕ್ಸ್ ಪ್ಯಾಕ್ ನೊಂದಿಗೆ ಕಣಕ್ಕಿಲಿಯಲಿದ್ದಾರೆ.
https://www.instagram.com/p/BgX3ZqzD29d/?hl=en&taken-by=robinaiyudauthappa
ಟೀಂ ಇಂಡಿಯಾದ ಹಲವು ಆಟಗಾರರು ತಮ್ಮ ದೇಹದ ಫಿಟ್ನೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರಸ್ತುತ ರಾಬಿನ್ ಸಹ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. 2017 ಸೆಪ್ಟೆಂಬರ್ ನಿಂದ 2018 ಮಾರ್ಚ್ ನಡುವಿನ 6 ತಿಂಗಳ ಅವಧಿಯಲ್ಲಿ ರಾಬಿನ್ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
111 ನೇ ಐಪಿಎಲ್ ಆವೃತ್ತಿಯಲ್ಲಿ ರಾಬಿನ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕೆ ಇಳಿಯಲಿದ್ದು, ಜನವರಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ 6.40 ಕೋಟಿ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಆದರೆ ನೈಟ್ ರೈಡರ್ಸ್ ತಂಡ ತನ್ನ ರೈಟ್ ಟು ಮ್ಯಾಚ್ ಅಧಿಕಾರ ಬಳಸಿ ರಾಬಿನ್ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿತ್ತು.ಇದನ್ನೂ ಓದಿ: ಹಾಟ್ ಫೋಟೋ ಅಪ್ಲೋಡ್ ಮಾಡಿದ ವೇಗಿ ಜಸ್ಪ್ರಿತ್ ಬುಮ್ರಾ- ವರ್ಕೌಟ್ ಗುಟ್ಟು ರಟ್ಟು
https://www.instagram.com/p/BZn_C6ijFd9/?hl=en&taken-by=robinaiyudauthappa
https://www.instagram.com/p/BZQWabxDCiN/?hl=en&taken-by=robinaiyudauthappa
https://www.instagram.com/p/BZK4mnnFiB9/?hl=en&taken-by=robinaiyudauthappa

Leave a Reply