ಗನ್‌ ನಿಯಂತ್ರಣ ಮಸೂದೆ ಅಂಗೀಕರಿಸಿದ US ಸೆನೆಟ್‌; 30 ವರ್ಷಗಳ ಇತಿಹಾಸದಲ್ಲೇ ಮಹತ್ವದ ಶಾಸನ

ವಾಷಿಂಗ್ಟನ್‌: ದೇಶದ ಇತಿಹಾಸದಲ್ಲೇ ಮಹತ್ವದ ಕಾನೂನನ್ನು ಜಾರಿಗೊಳಿಸಲು ಅಮೆರಿಕ ಮುಂದಾಗಿದೆ. US ಸೆನೆಟ್ ʻಗನ್ ನಿಯಂತ್ರಣ ಮಸೂದೆʼಯನ್ನು ಅಂಗೀಕರಿಸಿದೆ. ಸುಮಾರು 30 ವರ್ಷಗಳ ನಂತರ ಅಂಗೀಕರಿಸಿದ ಅತ್ಯಂತ ಮಹತ್ವದ ಬಂದೂಕು ಶಾಸನ ಇದಾಗಿದೆ.

ಇದು ಯುವ ಖರೀದಿದಾರರ ಮೇಲೆ ಕಠಿಣ ತಪಾಸಣೆಗಳನ್ನು ವಿಧಿಸುತ್ತದೆ. ಅನುಮಾನಿತ ವ್ಯಕ್ತಿಗಳು ಬಂದೂಕು ಬಳಸುವುದನ್ನು ನಿಯಂತ್ರಿಸಲು ರಾಜ್ಯಗಳನ್ನು ಪ್ರೋತ್ಸಾಹಿಸುವ ಕಾನೂನು ಇದಾಗಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು‌ ಈ ಕಾನೂನಿಗೆ ಸಹಿ ಹಾಕುವ ಮೊದಲು ಇನ್ನೂ ಕೆಳಮನೆಯ ಅನುಮೋದನೆಯ ಅಗತ್ಯವಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

Shootout

ಕಳೆದ ತಿಂಗಳು ನ್ಯೂಯಾರ್ಕ್‌ನ ಬಫಲೋದಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಮತ್ತು ಟೆಕ್ಸಾಸ್‌ನ ಉವಾಲ್ಡೆಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ 31 ಜನರನ್ನು ಬಲಿತೆಗೆದುಕೊಂಡ ಸಾಮೂಹಿಕ ಗುಂಡಿನ ದಾಳಿಯ ನಂತರ ಈ ಮಸೂದೆ ಬಂದಿದೆ.

ಇದು ಅಸಾಧ್ಯ ಎಂದು ಅನೇಕರು ಭಾವಿಸಿದ್ದರು. ಆದರೆ ಸೆನೆಟ್‌ ಮಸೂದೆಯನ್ನು ಅಂಗೀಕರಿಸುವ ಮೂಲಕ ಸಾಧ್ಯವಾಗಿಸಿದೆ. ನಾವು ಸುಮಾರು 30 ವರ್ಷಗಳ ನಂತರ ಮಹತ್ವದ ಗನ್ ಸುರಕ್ಷತೆ ಮಸೂದೆಯನ್ನು ಅಂಗೀಕರಿಸಿದ್ದೇವೆ ಎಂದು ಶಾಸನವನ್ನು ಅಂಗೀಕರಿಸಿದ ನಂತರ ಸೆನೆಟ್ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಮತ್ತು ಅನೇಕ ರಿಪಬ್ಲಿಕನ್ಸ್‌ ಮಸೂದೆಯನ್ನು ವಿರೋಧಿಸಿದರು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿ ಪ್ರಕರಣಗಳ ಗಂಭೀರತೆ ಅರಿತು ಮಸೂದೆಯನ್ನು ಅಂಗೀಕರಿಸಲಾಗಿದೆ.

Live Tv

Comments

Leave a Reply

Your email address will not be published. Required fields are marked *