ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ, ಉಕ್ರೇನ್‌ಗೆ ನೆರವಾಗುತ್ತೇವೆ: ಅಮೆರಿಕ

ವಾಷಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದರೆ, ಅಮೆರಿಕ ಉಕ್ರೇನ್‌ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದರು.

ಅಮೆರಿಕ ಹಾಗೂ ಅಂತರರಾಷ್ಟ್ರೀಯ ಸಮುದಾಯ ಸದಸ್ಯರು ರಷ್ಯಾ, ಉಕ್ರೇನ್ ಮೇಲೆ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದಾರೆ. ಆದರೆ ಇದು ರಷ್ಯಾದ ಬೆದರಿಕೆಯಷ್ಟೇ ಆಗಿರಬಹುದು ಎಂದು ಜೆನ್ ಪಾಕ್ಸಿ ಹೇಳಿದರು. ಇದನ್ನೂ ಓದಿ: ನೇಪಾಳದಲ್ಲಿ ರೈಲ್ವೇ ಜಾಲ, ರುಪೇಗೆ ಮೋದಿಯಿಂದ ಚಾಲನೆ

ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ್ದಲ್ಲಿ, ಉಕ್ರೇನ್‌ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜನ್ನು ನೀಡುತ್ತೇವೆ. ಆದರೆ ಉಕ್ರೇನ್‌ಗೆ ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಶುಕ್ರವಾರ ಅಮೆರಿಕ ಉಕ್ರೇನ್‌ಗೆ 300 ಮಿಲಿಯನ್ ಡಾಲರ್ (ಸುಮಾರು 2 ಸಾವಿರ ಕೋಟಿ ರೂ.) ಭದ್ರತಾ ನೆರವನ್ನು ನೀಡಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಪ್ರಾರಂಭಿಸಿದಾಗಿನಿಂದ 1.6 ಬಿಲಿಯನ್ ಡಾಲರ್ (ಸುಮಾರು 12 ಸಾವಿರ ಕೋಟಿ ರೂ.) ನೆರವನ್ನು ನೀಡಿದೆ.

Comments

Leave a Reply

Your email address will not be published. Required fields are marked *