ಭಾರತದ ಜೊತೆ ಟ್ರೇಡ್ ಡೀಲ್ ಫೈನಲ್ ಆಗಿಲ್ಲ; 20-25% ಟ್ಯಾರಿಫ್ ಹಾಕ್ತೀನಿ ಎಂದ ಟ್ರಂಪ್

ವಾಷಿಂಗ್ಟನ್‌: ಭಾರತದ ಜೊತೆ ವ್ಯಾಪಾರ ಒಪ್ಪಂದ ಆಗಿಲ್ಲ. ಹೀಗಾಗಿ, 20ರಿಂದ 25% ಸುಂಕ ಹಾಕಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಉಭಯ ದೇಶಗಳು ಶೀಘ್ರದಲ್ಲೇ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯವಾಗದಿದ್ದರೆ, ಭಾರತದ ಆಮದುಗಳ ಮೇಲೆ 25% ರಷ್ಟು ಸುಂಕವನ್ನು ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತಕ್ಕೆ 20% ರಿಂದ 25% ರ ವರೆಗೆ ಸುಂಕ ವಿಧಿಸಲಾಗುತ್ತದೆಯೇ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ಟ್ರಂಪ್, ಹೌದು, ನಾನು ಹಾಗೆ ಭಾವಿಸುತ್ತೇನೆ. ಭಾರತವು ಆ ಪರಿಸ್ಥಿತಿ ತಂದುಕೊಂಡಿದೆ. ಆದರೆ, ಅವರು ನನ್ನ ಸ್ನೇಹಿತರು ಎಂದು ಮಾತನಾಡಿದ್ದಾರೆ.

ಅಮೆರಿಕ ಮತ್ತು ಭಾರತ ತಿಂಗಳುಗಳಿಂದ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸುತ್ತಿವೆ. ಆದರೆ, ಯಾವುದೇ ಅಂತಿಮ ಒಪ್ಪಂದಕ್ಕೆ ಬಂದಿಲ್ಲ. ಭಾರತೀಯ ಮಾರುಕಟ್ಟೆಗೆ ಅಮೆರಿಕದ ಸರಕುಗಳು ಹೆಚ್ಚಾಗಿ ಪ್ರವೇಶಿಸಲು ಟ್ರಂಪ್ ಒತ್ತಾಯಿಸುತ್ತಿದ್ದಾರೆ. ಇತರ ವ್ಯಾಪಾರ ಮಾತುಕತೆಗಳಲ್ಲಿ ಅವರು ಆಗಾಗ್ಗೆ ಇದೇ ರೀತಿಯ ಬೇಡಿಕೆಗಳನ್ನು ಇಟ್ಟಿದ್ದಾರೆ.