ಪಾಕ್‍ಗೆ ಹಣದ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲಿ: ಅಫ್ಘಾನ್ ಪಾಪ್ ತಾರೆ

ಪಾಕಿಸ್ತಾನಕ್ಕೆ ಅಮರಿಕೆ ಹಣ ನೆರವು ನೀಡುವುದನ್ನು ನಿಲ್ಲಿಸಲಿ ಎಂದು ಅಫ್ಘಾನಿಸ್ತಾನದ ಪಾಪ್ ಸ್ಟಾರ್ ಆರ್ಯನ ಸಯೀದ್ ಆಗ್ರಹಿಸಿದ್ದಾರೆ.

ತಾಲಿಬಾನ್ ಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಆರ್ಯನ ಗುರುವಾರ ಕಾಬೂಲ್ ನಿಂದ ಕಾಲ್ಕಿತ್ತಿದ್ದರು. ಈ ವಿಚಾರವನ್ನು ತಮ್ಮ ಇನ್ ಸ್ಟಾದಲ್ಲಿ ಖಚಿತಪಡಿಸಿದ್ದಾರೆ. ಅಫ್ಘಾನಿಸ್ತಾದಿಂದ ಪಲಾಯನ ಮಾಡಿ ಯುಎಸ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಬಳಿಕ ಇನ್‍ಸ್ಟಾಗ್ರಾಮ್ ಪೋಸ್ಟ್‍ನಲ್ಲಿ, ‘ಮರೆಯಲಾಗದ ಒಂದೆರಡು ರಾತ್ರಿಗಳನ್ನು ಕಳೆದ ಬಳಿಕ ಇದೀಗ ನಾನು ಬದುಕಿದ್ದು, ಕ್ಷೇಮವಾಗಿದ್ದೇನೆ. ಸದ್ಯ ಕತಾರ್‍ನ ದೋಹಾ ತಲುಪಿ ಇಸ್ತಾಂಬುಲ್‍ಗೆ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡು ವಿಮಾನದಲ್ಲಿನ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಅಮೆರಿಕ ಅರ್ಥೈಸಿಕೊಳ್ಳಬೇಕು. ಐಎಸ್‍ಐಎಸ್ ತಾಲಿಬಾನ್‍ಗಳಿಗೆ ಭಯೋತ್ಪಾದಕರನ್ನು ಉತ್ಪಾದಿಸುತ್ತದೆ ಎಂದು ಆರೋಪಿಸುವ ಪಾಕಿಸ್ತಾನಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ಯುಎಸ್ ಸರ್ಕಾರವನ್ನು ಒತ್ತಾಯಿಸಿದರು. ಅಫ್ಘಾನ್ ನಾಗರಿಕರ ಸರಣಿ ಫೋಟೋಗಳನ್ನು ಹಂಚಿಕೊಂಡಿರುವ ಅವರು ಪಾಕ್ ಗೆ ನೀಡುತ್ತಿರುವ ಧನ ಸಹಾಯವನ್ನು ಅಮೆರಿಕ ನಿಲ್ಲಿಸಬೇಕೆಂದು ಅವರು ಕೇಳಿಕೊಂಡರು.

ಪಾಪ್ ತಾರೆ ಆರ್ಯನ ಸಯೀದ್ ಅತ್ಯಂತ ಜನಪ್ರಿಯ ಅಫ್ಘಾನ್ ಗಾಯಕಿ. ಅವರು ಪರ್ಷಿಯನ್ ಮತ್ತು ಪಾಷ್ಟೋದಲ್ಲಿ ಹಾಡುತ್ತಾರೆ. ಕುತೂಹಲಕಾರಿ ಸಂಗತಿ ಎಂದರೆ, ಅವರು ಅಫ್ಘನ್ ಆವೃತ್ತಿಯ ದಿ ವಾಯ್ಸ್ಲ್ ನಲ್ಲಿ ಜಡ್ಜ್ ಆಗಿದ್ದರು. ನಂತರ ಅವರು ಅಫ್ಘಾನ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾದರು. ಅವರು ಅಫ್ಘಾನ್ ಐಕಾನ್ ಪ್ರಶಸ್ತಿ ಮತ್ತು 2017 ರ ಅಫ್ಘಾನಿಸ್ತಾನದ ಅತ್ಯುತ್ತಮ ಮಹಿಳಾ ಕಲಾವಿದೆಯಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Comments

Leave a Reply

Your email address will not be published. Required fields are marked *