2 ವರ್ಷದಿಂದ ಕುತ್ತಿಗೆಯಲ್ಲಿ ಟೈರ್ – ಕಡವೆಗೆ ಕೊನೆಗೂ ಸಿಕ್ಕಿತ್ತು ಮುಕ್ತಿ

ವಾಷಿಂಗ್ಟನ್: ಕುತ್ತಿಗೆಗೆ ಟೈರ್ ಸಿಕ್ಕಿಕೊಂಡು ಸುಮಾರು ಎರಡು ವರ್ಷಗಳ ಕಾಲ ಒದ್ದಾಡುತ್ತಿದ್ದ ಕಡವೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಸುಮಾರು ಎರಡು ವರ್ಷಗಳಿಂದ ಟೈರ್ ಕತ್ತಿಗೆ ಸಿಕ್ಕಿಕೊಂಡು ಕಡವೆ ಕಷ್ಟ ಪಡುತ್ತಿತ್ತು. ಅದನ್ನು ಈಗ ಕೊಲೊರಾಡೋ ವನ್ಯಜೀವಿ ಅಧಿಕಾರಿಗಳು ತೆಗೆದು ಬಂಧನದಿಂದ ಮುಕ್ತಗೊಳಿಸಿದ್ದಾರೆ.

ವನ್ಯಜೀವಿ ಅಧಿಕಾರಿಗಳು 2019 ರ ಜುಲೈನಲ್ಲಿ ಮೊದಲು ಟೈರಿನೊಂದಿಗೆ ಮರಿ ಕಡವೆಯನ್ನು ನೋಡಿದ್ದರು. ನಂತರ ಟೈರ್ ಅನ್ನು ತೆಗೆಯಲು ಸುಮಾರು 2 ವರ್ಷಗಳಿಂದ ಕಡವೆಯನ್ನು ಹುಡುಕುತ್ತಿದ್ದರು. ಇದು 600 ಪೌಂಡ್(270 ಕಿಲೋ)ಇದ್ದು, ಟೈರ್ ತೆಗೆದ ನಂತರ 35 ಪೌಂಡ್ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

ಟೈರ್ ಅನ್ನು ತೆಗೆಯುವ ವೇಳೆ ಕಡವೆಗೆ ಸ್ವಲ್ಪ ಗಾಯವಾಗಿದೆ. ಅದನ್ನು ಹೊರತು ಪಡಿಸಿದರೆ ಕಡವೆ ಚೆನ್ನಾಗಿದೆ ಎಂದು ವನ್ಯಜೀವಿ ಅಧಿಕಾರಿ ಸ್ಕಾಟ್ ಮುರ್ಡೋಕ್ ಹೇಳಿದ್ದಾರೆ.

ಕಡವೆಗೆ 4 ವರ್ಷ ವಯಸ್ಸಾಗಿದೆ. ಮರಿಯಾಗಿದ್ದಾಗ ಕಡವೆ ಏನಕ್ಕದ್ದರೂ ತಲೆಯನ್ನು ಉಜ್ಜುತ್ತಾವೆ. ಅದೇ ರೀತಿಯಾಗಿ ಟೈರ್‌ಗೆ ತಲೆಯನ್ನು ಉಜ್ಜಿದ್ದು, ಆಗ ಸಿಲುಕಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದೇ ಬಿಟ್ಟ

Comments

Leave a Reply

Your email address will not be published. Required fields are marked *