ಉಪನ್ಯಾಸಕರೊಟ್ಟಿಗೆ ಕುಳಿತು ಅಶ್ಲೀಲಚಿತ್ರ ವೀಕ್ಷಿಸಲು ಕೋರ್ಸ್ ಆಫರ್ ಕೊಟ್ಟ ಕಾಲೇಜು

WESTMINISTER COLLEGE

ವಾಷಿಂಗ್ಟನ್‌: ಯುಎಸ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಹಾರ್ಡ್‌ಕೋರ್‌ ಪೋರ್ನೋಗ್ರಫಿ ಕೋರ್ಸ್‌ ನೀಡಿದ್ದು, ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರೊಂದಿಗೆ ಕುಳಿತು ಪೋರ್ನ್ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ ಎಂದು ಹೇಳಿದೆ.

ಯುಎಸ್ ನಗರದ ಉತಾಹ್‌ನಲ್ಲಿರುವ ವೆಸ್ಟ್‌ ಮಿನಿಸ್ಟರ್ ಕಾಲೇಜು ಈ ಕೋರ್ಸ್ ಅನ್ನು ಮೊದಲ ಬಾರಿಗೆ ನೀಡುತ್ತಿದೆ. `ಫಿಲ್ಮ್ 3000′ ಕಾರ್ಯಕ್ರಮದ ಅಡಿಯಲ್ಲಿ ಬರುವ ಈ ಕೋರ್ಸ್ ಮೂರು ಕ್ರೆಡಿಟ್‌ಗಳನ್ನು ಒಳಗೊಂಡಿರುತ್ತದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

EDUCATION
ಸಾಂದರ್ಭಿಕ ಚಿತ್ರ

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜನನಾಂಗ, ವರ್ಗ, ಲಿಂಗ ಮತ್ತು ಪ್ರಾಯೋಗಿಕ ಹಾಗೂ ಆಮೂಲಾಗ್ರ ಕಲಾ ಪ್ರಕಾರದ ಲೈಂಗಿಕತೆಯ ಬಗ್ಗೆ ಚರ್ಚಿಸುವುದು ಕೋರ್ಸ್‌ನ ಗುರಿಯಾಗಿದೆ. ಇದು ಕೆಲವು ಮುಕ್ತ ಆಯ್ಕೆಯ ಕೋರ್ಸ್‌ಗಳನ್ನು ನೀಡುವ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಲು ಒಂದು ಅವಕಾಶ ಕಲ್ಪಿಸುತ್ತದೆ ಎನ್ನಲಾಗಿದೆ.  ಇದನ್ನೂ ಓದಿ: ಚಾಮರಾಜನಗರದ ಲಿಪ್‌ಲಾಕ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಪೊಲೀಸರು 

STUDENTS IN US
ಸಾಂದರ್ಭಿಕ ಚಿತ್ರ

ವಿದ್ಯಾರ್ಥಿಗಳು ವಿವಾದಾತ್ಮಕ ವಿಷಯಗಳ ಬಗ್ಗೆ ಗಂಭೀರ ತನಿಖೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆಯೇ ಎಂಬುದನ್ನು ನಿರ್ಧರಿಸಲು ಈ ಕೋರ್ಸ್ ಸಹಾಯ ಮಾಡುತ್ತದೆ. 2022-2023 ಶೈಕ್ಷಣಿಕ ವರ್ಷದಲ್ಲಿ ಪೋರ್ನ್ ತರಗತಿಯನ್ನು ನಡೆಸಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಪೋರ್ನ್ ವೀಡಿಯೋಗಳನ್ನು ವೀಕ್ಷಿಸುವುದು ನಿಜಕ್ಕೂ ಅಸಹ್ಯಕರವಾದದ್ದು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಟೀಕೆಗಳೂ ಕೇಳಿಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೋರ್ಸ್‌ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *