ದಾವೋಸ್‍ನಲ್ಲಿ ಮೋದಿ, ಟ್ರಂಪ್ ನೀತಿ ಟೀಕಿಸಿದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್

ದಾವೋಸ್: ಸ್ವಿಟ್ಜರ್ಲೆಂಡಿನ ದಾವೋಸ್‍ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಹಂಗೇರಿ, ಅಮೆರಿಕದ ಶತಕೋಟ್ಯಧಿಪತಿ, ದಾನಿ ಜಾರ್ಜ್ ಸೊರೊಸ್ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಟೀಕಿಸಿದ್ದಾರೆ.

ರಾಷ್ಟ್ರೀಯತೆ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಏರಿದ ನರೇಂದ್ರ ಮೋದಿ ಸರ್ಕಾರ ಭಾರತದ ಹಿನ್ನಡೆಗೆ ಕಾರಣವಾಗಿದೆ. ಪ್ರಜಾಪ್ರಭುತ್ವದ ಮೂಲಕ ಆಯ್ಕೆ ಆಗಿರುವ ಮೋದಿ ಸರ್ಕಾರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮುಂದಾಗುತ್ತಿದೆ. ಅರೆ ಸ್ವಾಯತ್ತ ಮುಸ್ಲಿಂ ಪ್ರದೇಶವಾಗಿದ್ದ ಕಾಶ್ಮೀರದ ಮೇಲೆ ನಿರ್ಬಂಧ ಹೇರಲಾಗಿದೆ. ಈಗ ಲಕ್ಷಾಂತರ ಮುಸ್ಲಿಮರ ಪೌರತ್ವ ರದ್ದು ಮಾಡುವ ಬೆದರಿಕೆ ಹಾಕುತ್ತಿದೆ ಎಂದು ದೂರಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾರ್ಸಿಸಿಸ್ಟ್(ಆತ್ಮರತಿ) ಹೊಂದಿರುವ ವ್ಯಕ್ತಿ. ಇಡಿ ವಿಶ್ವವೇ ತನ್ನ ಸುತ್ತ ತಿರುಗಬೇಕೆಂದು ಆಶಿಸುವ ವ್ಯಕ್ತಿ ಎಂದು ಆರೋಪಿಸಿದರು. ಚೀನಾ ಅಮೆರಿಕ ನಡುವಿನ ವ್ಯಾಪಾರ ಸಮರದ ಬಗ್ಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹಿತಾಸಕ್ತಿಯನ್ನು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸುತ್ತಿರುವ ಟ್ರಂಪ್ ಮತ್ತೊಮ್ಮೆ ಚುನಾವಣೆಯಲ್ಲಿ ಆಯ್ಕೆ ಮಾಡಲು ಏನು ಬೇಕಾದರೂ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಭಾಷಣದಲ್ಲಿ 89 ವರ್ಷದ ಜಾರ್ಜ್ ಸೊರೊಸ್ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು 100 ಶತಕೋಟಿ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ.

 

Comments

Leave a Reply

Your email address will not be published. Required fields are marked *