ಒಂದೇ ದಿನದಲ್ಲಿ 1 ಕೋಟಿ ವ್ಯೂ ಪಡೆದ ಹಾಟ್ ಹಾಟ್ ‘ಹೇಟ್ ಸ್ಟೋರಿ-4’ ಟ್ರೇಲರ್

ಮುಂಬೈ: ಬಾಲಿವುಡ್ ನಲ್ಲಿ ಸಿನಿಮಾಗಳ ಯಶಸ್ಸಿನ ನಂತರ ಅದೇ ಟೈಟಲ್ ಬಳಸಿಕೊಂಡು ಹಲವು ಚಿತ್ರಗಳು ತೆರೆಕಾಣುತ್ತವೆ. ಈಗ ಹಾಟ್ ಸೀನ್ ಗಳ ಮೂಲಕವೇ ಯಶಸ್ವಿ ಯಾಗಿರುವ ‘ಹೇಟ್ ಸ್ಟೋರಿ’ ಚಿತ್ರದ ನಾಲ್ಕನೇಯ ಅವತರಣಿಕೆ ತೆರೆಯ ಮೇಲೆ ಬರಲಿದೆ. ಶನಿವಾರ ‘ಹೇಟ್ ಸ್ಟೋರಿ-4’ ಸಿನಿಮಾದ ಟ್ರೇಲರ್ ಬಿಡುಗೊಡೆಗೊಂಡಿದ್ದು ನಂಬರ್ 2 ಟ್ರೆಂಡಿಂಗ್ ನಲ್ಲಿದೆ.

ಹೇಟ್ ಸ್ಟೋರಿ-4ರಲ್ಲಿ ಊರ್ವಶಿ ರೌತೆಲಾ, ವಿವಾನ ಭಥೆನಾ ಮತ್ತು ಕರಣ್ ವಾಹಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಳೆಯ ಸಿನಿಮಾಗಳಂತೆ ಇಲ್ಲಿಯೂ ರೊಮ್ಯಾಂಟಿಕ್ ಸೀನ್‍ಗಳಿಗೆ ಕೊರತೆ ಕಾಣುವುದಿಲ್ಲ. ಸಿನಿಮಾದಲ್ಲಿ ಊರ್ವಶಿ ನಟಿ ಆಗಬೇಕೆಂಬ ಕನಸನ್ನು ಹೊಂದಿರುವ ನಟಿಯಾಗಿದ್ದು, ಈ ವೇಳೆ ನಾಯಕ ನಟರಿಬ್ಬರ ಪರಿಚಯವಾಗುತ್ತದೆ. ಸಿನಿಮಾದಲ್ಲಿ ಸಹೋದರರಾಗಿರುವ ನಟರಿಬ್ಬರಿಗೂ ನಾಯಕಿಯ ಮೇಲೆ ಪ್ರೇಮಾಂಕುರವಾಗುತ್ತದೆ. ಮುಂದೆ ಕಥಾ ನಾಯಕಿಗೆ ಯಾರ ಜೊತೆ ಲವ್ ಆಗುತ್ತೆ, ತನ್ನ ಕನಸು ಪೂರ್ಣ ಮಾಡಿಕೊಳ್ಳಲು ಇಬ್ಬರು ಸೋದರರನ್ನು ಯಾವ ರೀತಿ ಬಳಸಿಕೊಳ್ಳುತ್ತಾಳೆ ಎಂಬುವುದೆ ಸಿನಿಮಾ ಕಥೆ.

ವಿಶಾಲ್ ಪಾಂಡ್ಯ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಮಾರ್ಚ್ 09 ರಂದು ತೆರೆಕಾಣಲಿದೆ. 2016ರಲ್ಲಿ ತೆರೆಕಂಡಿದ್ದ ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಸಿನಿಮಾದಲ್ಲಿ ನಟಿಸಿದ್ದರು. 2017ರಲ್ಲಿ ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

2012ರಲ್ಲಿ ಮೊದಲ ಬಾರಿಗೆ ಹೇಟ್ ಸ್ಟೋರಿ ಚಿತ್ರ ರಿಲೀಸ್ ಆಗಿತ್ತು. ಚಿತ್ರದಲ್ಲಿ ನಟಿ ಪೌಲಿದಾಮ್ ಬೋಲ್ಡ್ ಆಗಿ ನಟಿಸುವುದರ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆಗಿದ್ದರು. 2014ರಲ್ಲಿ ಹೇಟ್ ಸ್ಟೋರಿ-2 ನೇ ಭಾಗ ತೆರೆಕಂಡಿತ್ತು. 2ನೇ ಭಾಗದಲ್ಲಿ ಸರ್ವಿನ್ ಚಾವ್ಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ಸನ್ನಿ ಲಿಯೋನ್ ‘ಪಿಂಕ್ ಲಿಪ್ಸ್’ ಹಾಡಿಗೆ ಹೆಜ್ಜೆ ಹಾಕಿದ್ದರು. ಇನ್ನು ಹೇಟ್ ಸ್ಟೋರಿ-3 ನೇ ಭಾಗ ಮಲ್ಟಿ ಸ್ಟಾರ್ ಗಳಿಂದ ಕೂಡಿತ್ತು. ಡೈಸಿ ಶಾ, ಜರೀನ್ ಖಾನ್ ಇಬ್ಬರೂ ನಟಿಯರು ಒಬ್ಬರಿಗಿಂತ ಒಬ್ರೂ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ರೆ, ಕರಣ್ ಸಿಂಗ್ ಗ್ರೋವರ್ ಮತ್ತು ಶರ್ಮಾ ಸಿಂಗ್ ನಟರು ತಮ್ಮ ಸಿಕ್ಸ್ ಪ್ಯಾಕ್ ಗಳಿಂದ ಗಮನ ಸೆಳೆದಿದ್ದರು. ಹೇಟ್ ಸ್ಟೋರಿ 2, 3 ಮತ್ತು 4ನೇ ಸಿನಿಮಾಗಳು ವಿಶಾಲ್ ಪಾಂಡ್ಯ ನಿರ್ದೇಶನದಲ್ಲಿ ಮೂಡಿ ಬಂದಿವೆ.

Comments

Leave a Reply

Your email address will not be published. Required fields are marked *