ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು

ಕ್ಯಾಂಡಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಪಾಕಿಸ್ತಾನಿ ಬೌಲರ್ ನಸೀಮ್ ಶಾ (Naseem Shah) ಜೊತೆಗೆ ಊರ್ವಶಿ ಹೆಸರು ಸಖತ್ ಸದ್ದು ಮಾಡಿತ್ತು. ಇವರಿಬ್ಬರ ಮಧ್ಯೆ ಪ್ರೀತಿಯಿದೆ ಎಂಬರ್ಥದಲ್ಲಿ ಜಾಲತಾಣದಲ್ಲಿ ಪೋಸ್ಟ್‌ಗಳು ಸಖತ್ ಹರಿದಾಡುತ್ತಿದ್ದವು. ಇದೀಗ ಇಂಡೋ-ಪಾಕ್‌ ಪಂದ್ಯದ ವೇಳೆ ಮತ್ತೆ ನೆಟ್ಟಿಗರು ಊರ್ವಶಿ ರೌಟೇಲಾ ಅವರ ಕಾಲೆಳೆದಿದ್ದಾರೆ.

ಊರ್ವಶಿ ರೌಟೇಲಾ ಹಸಿರು ಸೀರೆಯುಟ್ಟ ಫೋಟೋ ಜೊತೆಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಫೋಟೋವನ್ನ ಹಂಚಿಕೊಂಡಿದ್ದು, ಹಿಗ್ಗಾಮುಗ್ಗಾ ಟ್ರೋಲ್‌ ಮಾಡುತ್ತಿದ್ದಾರೆ. ನಸೀಮ್‌ ಶಾ ಇನ್‌ಸ್ಟಾಗ್ರಾಮ್‌ ಖಾತೆಗೂ ಫೋಟೋವನ್ನ ಟ್ಯಾಗ್‌ ಮಾಡಿ, ಊರ್ವಶಿ ರೌಟೇಲಾ ಸೀಕ್ರೆಟ್‌ ಆಗಿ ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ಅಂತಾ ಟಾಂಗ್‌ ಕೊಡುತ್ತಿದ್ದಾರೆ. ಇದನ್ನೂ ಓದಿ: ಪಾಕ್‌ ವಿರುದ್ಧ ಸ್ಮರಣೀಯ ದಾಖಲೆ ಬರೆದ ಟಾಪ್‌-5 ಟೀಂ ಇಂಡಿಯಾ ಬ್ಯಾಟರ್‌ಗಳು ಇವರೇ

 

ನೆಟ್ಟಿಗರು ಊರ್ವಶಿ ರೌಟೇಲಾ ಅವರಿಂದ ರಿಷಬ್ ಪಂತ್ ಅವರನ್ನ ಕಾಪಾಡುವಂತೆ ಶುಭಮನ್ ಗಿಲ್ ಇಂದು ನಸೀಮ್ ಶಾ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಊರ್ವಶಿ ಸಪೋರ್ಟ್‌ ಮಾಡ್ತಿರೋದು ಪಾಕಿಸ್ತಾನಕ್ಕೋ ಅಥವಾ ನಸೀಮ್‌ ಶಾಗೋ? ಅಂತಾ ಕುಟುಕಿದ್ದಾರೆ. ಇದನ್ನೂ ಓದಿ: `ಐರಾವತ’ ನಟಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಪಾಕಿಸ್ತಾನಿ ಬೌಲರ್ ನಸೀಮ್ ಶಾ

ಕಳೆದ ವರ್ಷ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್‌ ಮಾಡುತ್ತಿದ್ದ ವೇಳೆ ನಸೀಮ್‌ ಶಾ ಸಣ್ಣ ನಗೆ ಬೀರಿದ್ದ ವೀಡಿಯೋವನ್ನ ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದರು. ಆದ್ರೆ ಸಂದರ್ಶನದ ವೇಳೆ ಆಕೆ ಯಾರೂ ಅಂತಾನೇ ನನಗೆ ಗೊತ್ತಿಲ್ಲ ಎಂದು ನಸೀಮ್‌ ಶಾ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ್ದರು. ಇದೀಗ ಮತ್ತೆ ನೆಟ್ಟಿಗರು ಕಾಲೆಳೆದಿದ್ದಾರೆ.

ಈ ಬಾರಿ ಪ್ಯಾರಿಸ್‌ನ ಐಫೆಲ್‌ ಟವರ್‌ ಮುಂಭಾಗದಲ್ಲಿ ಊರ್ವಶಿ ರೌಟೇಲಾ ವಿಶ್ವಕಪ್‌ ಟ್ರೋಫಿಯನ್ನ ಅನಾವರಣಗೊಳಿಸಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]