ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಆಸ್ಟ್ರೇಲಿಯಾಗೆ ಹಾರಿದ ಊರ್ವಶಿ – ಟ್ರೋಲ್ ಆದ ಪಂತ್

ಸಿಡ್ನಿ: ನಟಿ ಊರ್ವಶಿ ರೌಟೇಲಾ (Urvashi Rautela) ನನ್ನ ಪ್ರೀತಿಯನ್ನು ಹಿಂಬಾಲಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ಆಸ್ಟ್ರೇಲಿಯಾಗೆ (Australia) ಹಾರಿದ್ದಾರೆ.

ಇತ್ತ ಊರ್ವಶಿ ರೌಟೇಲಾ ಪೋಸ್ಟ್ ನೋಡಿದ ಅಭಿಮಾನಿಗಳು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಕಾಳೆಲೆಯುತ್ತಿದ್ದಾರೆ. ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ಇಬ್ಬರೂ ಡೇಟಿಂಗ್‍ನಲ್ಲಿದ್ದಾರೆ ಎಂಬ ಗಾಸಿಪ್ ಇತ್ತು. ಕೆಲದಿನಗಳ ಹಿಂದೆ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತ್ತು ಎಂದು ವರದಿಯಾಗಿತ್ತು. ಆ ಬಳಿಕ ಇದೀಗ ಟಿ20 ವಿಶ್ವಕಪ್‍ಗಾಗಿ (T20 World Cup)  ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹೊತ್ತಲ್ಲೇ ಈ ರೀತಿ ಪೋಸ್ಟ್ ಮಾಡಿಕೊಂಡು ಊರ್ವಶಿ ರೌಟೇಲಾ ಆಸ್ಟ್ರೇಲಿಯಾಗೆ ತೆರಳಿರುವುದು ನೆಟ್ಟಿಗರಿಗೆ ಆಹಾರವಾಗಿದೆ. ಇದನ್ನೂ ಓದಿ: ನನ್ನ ಪುಟ್ಟ ರಾಜಕುಮಾರಿ ಇನ್ನಿಲ್ಲ – ಭಾರತದಲ್ಲಿರುವಾಗಲೇ ಪುತ್ರಿಯನ್ನು ಕಳೆದುಕೊಂಡ ಮಿಲ್ಲರ್

ಮೊದ ಮೊದಲು ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ ಡೇಟಿಂಗ್‍ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆಯೂ ಗಾಸಿಪ್ ಇದ್ದವು. ಆಗಾಗ್ಗೆ ಇಬ್ಬರೂ ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಗ್ಗೆ ಸುದ್ದಿ ಹಬ್ಬಿತ್ತು. ಆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ರಿಷಭ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು ಎಂದು ಊರ್ವಶಿ ಹೇಳಿಕೊಂಡಿದ್ದರು. ನನಗಾಗಿ ಸ್ಟಾರ್ ಕ್ರಿಕೆಟಿಗ ಒಬ್ಬ ಅಷ್ಟೊಂದು ಹೊತ್ತು ಕಾದಿದ್ದ ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ರಿಷಭ್ ತಿರುಗೇಟು ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯ ಕೋಲ್ಡ್ ವಾರ್ ಶುರುವಾಗಿತ್ತು. ಈ ನಡುವೆ ಇದೀಗ ಊರ್ವಶಿ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಕಳೆದ ಹತ್ತು ವರ್ಷಗಳಿಂದ ಭಾರತಕ್ಕೆ ಕಾಡುತ್ತಿರುವ ಪಾಕ್‍ನ ನಿದಾ ದಾರ್

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *