ಮೈಯೆಲ್ಲಾ ಕಣ್ಣು – ಉರ್ಫಿ ಹೊಸ ಲುಕ್‌ಗೆ ಪಡ್ಡೆ ಹುಡುಗರು ಫಿದಾ

ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಮೂಡಿಸಿದ ಮಾಜಿ ಬಿಗ್‌ಬಾಸ್‌ (Bigg Boss Hindi) ತಾರೆ ಉರ್ಫಿ ಜಾವೇದ್ (Urfi javed) ಅವರು ತಾವು ಧರಿಸುವ ಚಿತ್ರ-ವಿಚಿತ್ರ ಬಟ್ಟೆಯಿಂದಲೇ ಗುರುತಿಸಿಕೊಂಡಿದ್ದಾರೆ.

ಹಾಟ್‌ ಬೆಡಗಿ, ಪಡ್ಡೆ ಹುಡುಗಿ ಅಂತೆಲ್ಲಾ ಕರೆಸಿಕೊಳ್ಳೋ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್‌ಗೂ ಕೂಡ ಗುರಿಯಾಗ್ತಿದ್ದಾರೆ. ಕೆಟ್ಟ ಕಾಮೆಂಟ್ಸ್‌ಗೆ ಡೊಂಟ್ ಕೇರ್ ಎನುತ್ತಾ ಸದಾ ಮೈ ಕಾಣುವ ಬಟ್ಟೆಗಳನ್ನೇ ಸದಾ ಧರಿಸುವ ಉರ್ಫಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದೂ ಇದೆ.

 

View this post on Instagram

 

A post shared by Uorfi (@urf7i)

ಇತ್ತೀಚೆಗೆ ಟೊಮೆಟೋಗಳನ್ನೇ ಬಳಸಿ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದ ಉರ್ಫಿ ಈಗ ಮೈಯೆಲ್ಲಾ ಕಣ್ಣಾಗಿ ಬೋಲ್ಡ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಉರ್ಫಿ ಜಾವೇದ್ ಬೆನ್ನಿಗೆ ನಿಂತು ‘ಕಾಮಸೂತ್ರ’ ನೆನಪಿಸಿಕೊಂಡ ಶೆರ್ಲಿನ್ ಚೋಪ್ರಾ

ಪ್ಯಾಸ್ಟಿಗಳೊಂದಿಗೆ ನಟಿ ಎದೆ ಭಾಗವನ್ನು ಮುಚ್ಚಿಕೊಂಡಿದ್ದಾರೆ. ಕಣ್ಣಿನ ರೀತಿಯ ಪ್ರಿಂಟೆಡ್‌ ಕೂಡ ಇದೆ. ಈ ಫೋಟೋ ಜೊತೆಗೆ ನನ್ನ ಹುಚ್ಚು ಕಲ್ಪನೆಗಳಿಗೆ ಸಹಾಯ ಮಾಡಿದ್ದಕ್ಕಾಗಿ‌ ಸ್ಟೈಲಿಸ್ಟ್‌ ಶ್ವೇತಾ ಮಹಾದಿಕ್‌ ಅವರಿಗೆ ಧನ್ಯವಾದ. ನಮ್ಮಿಬ್ಬರ ಮನಸ್ಸು ಒಂದೇ ರೀತಿ ಅಂತಲೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಡ್ರೆಸ್ಸಿಂಗ್ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್

ಸದ್ಯ ಉರ್ಫಿ ಜಾವೇದ್‌ ಅವರ ಈ ಪೋಸ್ಟ್‌ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಕೆಲವರು ಫ್ಯಾನ್ಸ್‌ ಮಾತ್ರ ಉರ್ಫಿ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್‌ ಅಂತಾ ಹೇಳಿದ್ದಾರೆ. ಕೆಲ ನೆಟ್ಟಿಗರು ಬಿಗ್‌ ಬಾಸ್‌ ಕಣ್ಣುಗಳನ್ನೇ ಕದ್ದುಬಿಟ್ಟಿದ್ದಾರೆ, ಈಗ ಉರ್ಫಿಗೆ ನಾಲ್ಕು ಕಣ್ಣು ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]