ತನ್ನ ಸಾಧನೆಗೆ ಕಾರಣಳಾದ ಪ್ರೇಯಸಿಗೆ ಧನ್ಯವಾದ ತಿಳಿಸಿದ ಯುಪಿಎಸ್‍ಸಿ ಟಾಪರ್!

ನವದೆಹಲಿ: ಶುಕ್ರವಾರ ಯುಪಿಎಸ್‍ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಮುಂಬೈ ಐಐಟಿನ ಬಿಟೆಕ್ ವಿದ್ಯಾರ್ಥಿ ಕನಿಷ್ಕ್ ಕಟಾರಿಯಾ ಅಗ್ರಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಶ್ರೇಯಸ್ಸಿಗೆ ತನ್ನ ಪ್ರೇಯಸಿಯೇ ಕಾರಣ ಎಂದು ಆಕೆಗೆ ಪ್ರೀತಿಯಿಂದ ಧನ್ಯವಾದ ತಿಳಿಸಿದ್ದಾರೆ.

ಯುಪಿಎಸ್‍ಸಿ ಟಾಪರ್ ತಮ್ಮ ಶ್ರೇಯಸ್ಸಿನಲ್ಲಿ ತಮ್ಮ ಪ್ರೇಯಸಿಯ ಪಾತ್ರ ಹೆಚ್ಚಾಗಿದೆ ಎನ್ನುವುದನ್ನು ಅವರೇ ಸ್ವತಃ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹೌದು ಯುಪಿಎಸ್‍ಸಿ ಅಂತಹ ಉನ್ನತ ಪರೀಕ್ಷೆಯಲ್ಲಿ ತಾನು ಟಾಪರ್ ಆಗಲು ತನ್ನ ತಂದೆ, ತಾಯಿ ಹಾಗೂ ತನ್ನ ಪ್ರೇಯಸಿಯ ಪ್ರೋತ್ಸಾಹವೇ ಕಾರಣವೆಂದು ತಿಳಿಸಿದರು.

ಯುಪಿಎಸ್‍ಸಿ ಟಾಪರ್ ಓರ್ವ ತನ್ನ ಶ್ರೇಯಸ್ಸಿಗೆ ತನ್ನ ಪ್ರೇಯಸಿಯೇ ಕಾರಣವೆಂದು ತಿಳಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಕನಿಷ್ಕ್ ಕಟಾರಿಯಾ ಅವರ ಈ ಮಾತನ್ನು ಕೇಳಿದ ಮಂದಿ ಅಬ್ಬ ಎಂತಾ ಆದರ್ಶ ಪ್ರೇಮಿಗಳು ಎಂದು ಒಂದು ಕ್ಷಣ ಅಚ್ಚರಿಪಟ್ಟಿದಂತೂ ಸತ್ಯ.

ಯುಪಿಎಸ್‍ಸಿಯಲ್ಲಿ ಮೊದಲ ಸ್ಥಾನವನ್ನು ಕನಿಷ್ಕ್ ಕಟಾರಿಯಾ ಗಳಿಸಿದ್ದು, ಇನ್ನು ಎರಡು ಹಾಗೂ ಮೂರನೇ ಸ್ಥಾನವನ್ನು ಕ್ರಮವಾಗಿ ಅಕ್ಸತ್ ಜೈನ್ ಮತ್ತು ಜುನೈದ್ ಅಹ್ಮದ್ ಪಡೆದಿದ್ದಾರೆ. ಹಾಗೆಯೇ ಐದನೇ ಸ್ಥಾನವನ್ನು ಗಳಿಸಿರುವ ಸೃಷ್ಟಿ ಜಯಂತ್ ದೇಶ್ಮುಖ್ ಮಹಿಳೆಯರಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ.

ಈ ಬಾರಿ ಒಟ್ಟು 759 ಅಭ್ಯರ್ಥಿಗಳು (577 ಪುರುಷರು ಮತ್ತು 182 ಮಹಿಳೆಯರು) ಐಎಎಸ್, ಐಪಿಎಸ್ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಕರ್ನಾಟಲ ರಾಜ್ಯದ ಒಟ್ಟು 24 ಜನರು ಐಎಎಸ್, ಐಪಿಎಸ್ ನೇಮಕಾತಿಗೆ ಆಯ್ಕೆಯಾಗಿದ್ದಾರೆ. ರಾಹುಲ್ ಶರಣಪ್ಪ ದೇಶಕ್ಕೆ 17ನೇ ರ್ಯಾಂಕ್ ಗಳಿಸಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *