ಉಪೇಂದ್ರ ಹುಟ್ಟುಹಬ್ಬ: ‘ಯುಐ’ ಚಿತ್ರದ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಚಿತ್ರತಂಡ

ರಿಯಲ್‌ಸ್ಟಾರ್ ಉಪೇಂದ್ರ (Real Star Upendra) ಅವರು ಇಂದು (ಸೆ.18) 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿ ನಟ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಇದರ ನಡುವೆ ‘ಯುಐ’ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ದಸರಾ ಹಬ್ಬದ ವೇಳೆ, ಇದೇ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಕ್ಟೋಬರ್‌ನಿಂದ `ಯುಐ’ ಹಬ್ಬ ಶುರುವಾಗಲಿದೆ. ಈ ಚಿತ್ರಕ್ಕೆ ನಟಿಸುವುದರ ಜೊತೆಗೆ ಉಪೇಂದ್ರ ನಿರ್ದೇಶನ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

ಇನ್ನೂ ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಈ ಚಿತ್ರಕ್ಕೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಮತ್ತು ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.