ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

ಲಕ್ನೋ: ತಂಗಿ ಆರೋಗ್ಯ ಸರಿಯಿಲ್ಲವೆಂದು ಅಣ್ಣಂದಿರು ಓಲಾ ಕ್ಯಾಬ್ ದರೋಡೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗಾಜಿಪುರದ ಸೈದ್‍ಪುರ ಕೊತ್ವಾಲಿ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕ್ಯಾಬ್ ಬುಕ್ ಮಾಡಿ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರನ್ನು ದರೋಡೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಹಿಡಿದಿದ್ದು, ಟ್ಯಾಕ್ಸಿ ಜೊತೆಗೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

Ola to now sell used cars

ಕಾರಣವೇನು?
ಬಂಧಿತ ಆರೋಪಿಗಳನ್ನು ಈ ಕೃತ್ಯಕ್ಕೆ ಕಾರಣವೇನು ಎಂದು ಕೇಳಿದಾಗ ಅವರು, ನಮ್ಮ ತಂಗಿಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಮ್ಮ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಈ ಕೃತ್ಯ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ನಡೆದಿದ್ದೇನು?
ಆರೋಪಿಗಳು ವಾರಣಾಸಿ ಕ್ಯಾಂಟ್‍ನಿಂದ ಕ್ಯಾಬ್ ಬುಕ್ ಮಾಡಿದ್ದಾರೆ. ಚಾಲಕ ಇವರನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಸೈದ್‍ಪುರ ಬಳಿ ಕ್ಯಾಬ್ ಚಾಲಕನನ್ನು ಬೆದರಿಸಿದ್ದು, ಚೆನ್ನಾಗಿ ಥಳಿಸಿ ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಕಾರ್ ಚಾಲಕ ಜ್ಞಾನೇಂದ್ರ ಪಾಂಡೆ ದೂರು ನೀಡಿದ್ದಾರೆ.

POLICE JEEP

ಈ ದೂರಿನಲ್ಲಿ ಜ್ಞಾನೇಂದ್ರ ಅವರು, ವಾಹನ ಸಂಖ್ಯೆ ‘ಯುಪಿ 65 ಕೆಟಿ 1217’ ಸಂಖ್ಯೆಯ ಸುಜುಕಿ ಡಿಜೈರ್ ಕಾರನ್ನು ದರೋಡೆಕೋರರು ಕದ್ದಿದ್ದಾರೆ. ಈ ವೇಳೆ ಆರೋಪಿಗಳನ್ನು ನನ್ನ ಮೇಲೆ ಹಲ್ಲೆ ಮಾಡಿದ್ದು, ಕಾರಿನಿಂದ ಹೊರ ಹಾಕಿದ್ದಾರೆ. ಬಳಿಕ ಕಾರಿನ ಸಮೇತ ಪರಾರಿಯಾಗಿದ್ದಾರೆ. ಆ ಕಾರನ್ನು ನಾನು ಓಲಾಗೆ ಲಿಂಕ್ ಮಾಡಿಸಿಕೊಂಡು ಓಡಿಸುತ್ತಿದ್ದೆ ಎಂದು ವಿವರಣೆ ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದು, ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರನ್ನು ಮುಸುಕಿನಲ್ಲಿರಿಸಲಾಗಿದೆ: ಸುನಿಲ್ ಕುಮಾರ್

ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ರಂಬದನ್ ಸಿಂಗ್ ಮಾಧ್ಯಮದ ಮುಂದೆ ಹಾಜರುಪಡಿಸಿ ಮಾತನಾಡಿದ್ದು, ಈ ಗುಂಪಿನಲ್ಲಿರುವ ಇಬ್ಬರು ಹಳೆಯ ಕ್ರಿಮಿನಲ್ ದಾಖಲೆ ಹೊಂದಿದ್ದಾರೆ. ಇನ್ನಿಬ್ಬರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಸ್ತುತ ಆರೋಪಿಗಳ ಬಳಿ ಇದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಪಿಸ್ತೂಲ್, ಕಾಟ್ರಿಡ್ಜ್ ಮತ್ತು ಫೋನ್ ಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ವಿವರಿಸಿದರು.

Comments

Leave a Reply

Your email address will not be published. Required fields are marked *