ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

ಲಕ್ನೋ: ಸುಪ್ರೀಂಕೋರ್ಟ್ ತೀರ್ಪನ್ನು ರಾಮಪುರದ ನಿವಾಸಿ ಫರ್ಹತ್ ಖಾನ್ ರಕ್ತದಲ್ಲಿ ಬರೆದು ಸ್ವಾಗತಿಸಿದ್ದಾರೆ.

ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷರಾಗಿರುವ ಫರ್ಹತ್ ಖಾನ್ ಸ್ವಾಗತ ಕೋರಿರುವ ಶೈಲಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಫರ್ಹತ್ ತಮ್ಮ ರಕ್ತದಿಂದ ‘ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

ಹಿಂದೂಸ್ಥಾನಕ್ಕೆ ತೀರ್ಪನ್ನು ಅರ್ಥೈಸುವ ಕೆಲಸವನ್ನು ಮಾಡುತ್ತೇನೆ. ಇಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸಹೋದರತೆಗೆ ಗೆಲುವು ಸಿಕ್ಕಿದೆ. ನ್ಯಾಯಾಧೀಶರು ಎಲ್ಲ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯೋಚಿತವಾದ ತೀರ್ಪನ್ನು ಪ್ರಕಟಿಸಿದ್ದಾರೆ. ಹಾಗಾಗಿ ಅಯೋಧ್ಯೆ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಹಿಂದೂಸ್ಥಾನದ ಪ್ರತಿಯೊಂದು ಕಣದಲ್ಲಿ ರಾಮ್ ಮತ್ತು ರಹೀಂ ಇದ್ದಾರೆ ಎಂದು ಫರ್ಹರ್ ಹೇಳುತ್ತಾರೆ. ಇದನ್ನೂ ಓದಿ: ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ತೀರ್ಪನ್ನು ಯಾರೂ ಗೆಲುವು, ಸೋಲು ಎಂದು ಭಾವಿಸಬಾರದು – ಮೋಹನ್ ಭಾಗವತ್

Comments

Leave a Reply

Your email address will not be published. Required fields are marked *