ಪಾಕ್‌ ಗೆಲುವು ಸಂಭ್ರಮಾಚರಿಸಿದ ಪತ್ನಿ ವಿರುದ್ಧವೇ ಪತಿಯಿಂದ ದೂರು ದಾಖಲು!

ಲಕ್ನೋ: ಇತ್ತೀಚೆಗಷ್ಟೇ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ಪರವಾಗಿ ಸಂಭ್ರಮಾಚರಣೆ ಮಾಡಿದ್ದಾರೆಂದು ತನ್ನ ಪತ್ನಿಯ ವಿರುದ್ಧವೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಾಂಪುರದ ಅಜಿಮ್‌ ನಗರದಲ್ಲಿರುವ ಇಶಾನ್‌ ಮಿಯಾ ಎಂಬವರು ತನ್ನ ಪತ್ನಿ ರಬಿಯಾ ಶಂಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಪತ್ನಿ ಹಾಗೂ ಆಕೆಯ ಸಂಬಂಧಿಗಳು ಪಟಾಕಿ ಸಿಡಿಸಿ, ವಾಟ್ಸಪ್‌ನಲ್ಲಿ ಸ್ಟೇಟಸ್‌ಗಳನ್ನು ಹಾಕಿಕೊಂಡು ಪಾಕ್‌ ಗೆಲುವು ಸಂಭ್ರಮಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ಕ್ರಿಕೆಟ್ ಗುಂಗು ಡಿಸೆಂಬರ್ ಎರಡನೇ ವಾರದಿಂದ TCL ಕಿಕ್ ಸ್ಟಾರ್ಟ್

ವ್ಯಕ್ತಿ ದೂರು ಆಧರಿಸಿದ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಅಂಕಿತ್‌ ಮಿತ್ತಲ್‌ ತಿಳಿಸಿದ್ದಾರೆ.

ಈ ದಂಪತಿಯು ಮದುವೆಯಾದ ಸ್ವಲ್ಪ ದಿನಗಳಲ್ಲೇ ಬೇರೆಯಾಗಿದ್ದಾರೆ. ಪತ್ನಿ ತನ್ನ ಸಂಬಂಧಿಗಳೊಂದಿಗೆ ವಾಸವಾಗಿದ್ದಾರೆ. ಅಲ್ಲದೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ..?

ಭಾರತ ತಂಡದ ವಿರುದ್ಧ ಪಾಕ್‌ ಗೆಲುವನ್ನು ಸಂಭ್ರಮಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಕಾನೂನನ್ನು ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲಾಗಿದೆ. ಪರಿಣಾಮವಾಗಿ ಹಲವೆಡೆ ಸಂಭ್ರಮಾಚರಣೆ ಮಾಡಿದ್ದಕ್ಕೆ ಪ್ರಕರಣಗಳನ್ನು ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *