ಪಂಚರಾಜ್ಯಗಳ ಚುನಾವಣೆ: ಸೋಮವಾರ ಅಂತಿಮ ಹಂತದ ಮತದಾನ – ಮಾರ್ಚ್ 10ಕ್ಕೆ ಫಲಿತಾಂಶ

ನವದೆಹಲಿ: ದೇಶದ ಚಿತ್ತ ಸೆಳೆದಿರುವ ಪಂಚರಾಜ್ಯಗಳ ಚುನಾವಣೆ ಕೊನೆಘಟ್ಟಕ್ಕೆ ಬಂದಿದೆ. ನಾಳೆ ಉತ್ತರ ಪ್ರದೇಶದ 54 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಹಂತದ ಮತದಾನ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಬಿಜೆಪಿಗೆ ಈ ಬಾರಿ ಕಠಿಣ ಸ್ಪರ್ಧೆ ಎದುರಾಗಿದೆ. ಸಮಾಜವಾದಿ ಪಕ್ಷ ಪ್ರಬಲ ಪೈಪೋಟಿ ನೀಡಿದ್ದು ಬಹುಕೋನ ಸ್ಪರ್ಧೆ ಇದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಾಸಿಯಲ್ಲಿಯೂ ನಾಳೆ ಮತದಾನ ನಡೆಯಲಿದೆ. ಪೂರ್ವಾಚಲದಲ್ಲಿ ಸಣ್ಣ ಪಕ್ಷಗಳು ಪ್ರಮುಖ ಪಾತ್ರ ವಹಿಸುವ ಸಂಭವ ಇದೆ. ನಲೆ ಸಂಜೆ ಆರು ಗಂಟೆ ನಂತರ ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಲಿದೆ. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್‍ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್

ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಬಗ್ಗೆ ಹಲವು ಸಂಸ್ಥೆಗಳು, ಹಲವು ವಾಹಿನಿಗಳ ಜೊತೆಗೂಡಿ ಎಕ್ಸಿಟ್ ಪೋಲ್ ಪ್ರಕಟಿಸಲಿವೆ. ಪಂಚರಾಜ್ಯಗಳ ಅಸಲಿ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ – ಗ್ರೆನೇಡ್ ದಾಳಿಗೆ ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Comments

Leave a Reply

Your email address will not be published. Required fields are marked *