ನಿಮ್ಮ ಒಂದು ಮತದಿಂದ ಯುಪಿ ದೇಶದ ನಂ.1 ಆರ್ಥಿಕತೆ ರಾಜ್ಯವಾಗುತ್ತೆ: ಯೋಗಿ ಆದಿತ್ಯನಾಥ್‌

ಲಕ್ನೋ: ನಿಮ್ಮ ಒಂದು ಮತವು ಉತ್ತರ ಪ್ರದೇಶ ರಾಜ್ಯವನ್ನು ದೇಶದ ನಂ.1 ಆರ್ಥಿಕತೆ ರಾಜ್ಯವನ್ನಾಗಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಶಯ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಇಂದು 6ನೇ ಹಂತದ ಮತದಾನ ನಡೆಯುತ್ತಿದೆ. ಗೋರಖ್‌ಪುರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಯೋಗಿ ಆದಿತ್ಯನಾಥ್‌ ಮತ ಚಲಾಯಿಸಿದರು. ಇದನ್ನೂ ಓದಿ: 25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ

ಅಪಾರ ಸಂಖ್ಯೆಯಲ್ಲಿ ಜನತೆ ಮತ ಚಲಾಯಿಸುತ್ತಾರೆ ಎಂಬ ಭರವಸೆ ನನಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ದಾಖಲೆಯ ಮತ್ತು ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ನಾವು ಶೇ.80 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಿಜೆಪಿಗೆ ಮತ ಹಾಕಿ ಎಂದು ಯೋಗಿ ಆದಿತ್ಯನಾಥ್‌ ಕರೆ ನೀಡಿದ್ದಾರೆ.

ನಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

ಉತ್ತರ ಪ್ರದೇಶದಲ್ಲಿ ಇಂದು 6ನೇ ಹಂತದ ಮತದಾನ ನಡೆಯುತ್ತಿದೆ. 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನವಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಒಟ್ಟು 676 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Comments

Leave a Reply

Your email address will not be published. Required fields are marked *