ಸಮಾಜವಾದಿ ಪಕ್ಷದಿಂದ ಸನಾತನ ಧರ್ಮಕ್ಕೆ ಅವಮಾನ: ಯೋಗಿ

ಲಕ್ನೋ: ಸಮಾಜವಾದಿ ಪಕ್ಷದ ನಾಯಕಿ ಅವರು ಕೇಸರಿ ಬಣ್ಣವನ್ನು ತುಕ್ಕು ಹಿಡಿದಿರುವ ಬಣ್ಣಕ್ಕೆ ಹೋಲಿಸಿರುವ ಹೇಳಿಕೆಯು ಸನಾತನ ಧರ್ಮಕ್ಕೆ ಹಾಗೂ ದಾರ್ಶನಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೆಲವು ಸಮಾಜವಾದಿ ಪಕ್ಷದವರು ಕೇಸರಿ ಬಣ್ಣವನ್ನು ತುಕ್ಕಿಗೆ ಹೋಲಿಸಿದ್ದರು. ಇದರಿಂದ ಸನಾತನ ಧರ್ಮಕ್ಕೆ ಅವಮಾನವಾಗಿದೆ. ಆದರೆ ಈ ಕೇಸರಿ ಬಣ್ಣಕ್ಕೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಇದಕ್ಕೆ ನಾನು ಸನ್ಯಾಸಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

ಉತ್ತರಪ್ರದೇಶದ ಪ್ರತಿಯೊಬ್ಬ ನಿವಾಸಿಯು ನಮ್ಮನ್ನು ಸನ್ಯಾಸಿಯೆಂದು ಕರೆಯುತ್ತಾರೆ. ಕೇಸರಿ ಬಣ್ಣದ ಶಕ್ತಿಯಿಂದಲೇ ಇಷ್ಟೊಂದು ಹೆಸರು ಸಂಪಾದಿಸಿದ್ದೇನೆ. ಸೂರ್ಯೋದಯವಾದಾಗ ಸೂರ್ಯನ ಬಣ್ಣವು ಕೇಸರಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸ್ವಾಮಿ ವಿವೇಕಾನಂದರೂ ನಾವು ಹಿಂದುಗಳೆಂದು ಹೆಮ್ಮೆಯಿಂದ ಹೇಳಿದ್ದರು. ಅವರು ಧರಿಸುತ್ತಿದ್ದದ್ದು ಕೇಸರಿ ಬಣ್ಣದ್ದೇ ಆಗಿತ್ತು. ಏಕೆಂದರೆ ನಾವು ಸನ್ಯಾಸಿಗಳು ಇದು ನಮ್ಮ ಗುರುತಾಗಿದೆ ಎಂದರು. ಇದನ್ನೂ ಓದಿ: ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ

ಸಿರುತುದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಸಮಾಜವಾದ ಪಕ್ಷದ ನಾಯಕಿ ಡಿಂಪಲ್ ಯಾದವ್ ಮಾತನಾಡಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ತುಕ್ಕು ಹಿಡಿದಿದೆ. ಯೋಗಿ ಆದಿತ್ಯನಾಥ್ ಅವರು ತುಕ್ಕು ಹಿಡಿದಿರುವ ಬಣ್ಣದ ಕಾವಿಯನ್ನು ಧರಿಸುತ್ತರೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ- ಇಂದು ಬಿಡದಿಯಿಂದ ಮತ್ತೆ ಆರಂಭ

Comments

Leave a Reply

Your email address will not be published. Required fields are marked *