ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

ಲಕ್ನೋ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಉತ್ತರಪ್ರದೇಶದ ಮಹಾರಾಜಗಂಜ್‍ನ ಮದರಸದ ಧರ್ಮಗುರುನನ್ನು ಕೊಲುಹಿ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಜುನೈದ್ ಅನ್ಸಾರಿ ಬಂಧಿತ ಧರ್ಮಗುರು. ಈತ ಆಗಸ್ಟ್ 15ರಂದು ಮಹಾರಾಜಗಂಜ್ ಪ್ರದೇಶದ ಮದರಸದಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದ ಮಕ್ಕಳನ್ನು ತಡೆದು, ರಾಷ್ಟ್ರಗೀತೆ ಹಾಡದಂತೆ ಎಚ್ಚರಿಸಿದ್ದಾನೆ. ಆದರೆ ಮದರಸದ ಪ್ರಾಂಶುಪಾಲರು ಅನ್ಸಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಸಿಟ್ಟಿಗೆದ್ದ ಇತರೆ ಶಿಕ್ಷಕರು ಅನ್ಸಾರಿಯನ್ನು ತಡೆಯಲು ಮುಂದಾಗಿದ್ದಾರೆ.

ಈ ವೇಳೆ ಅನ್ಸಾರಿಯು ಇಸ್ಲಾಂನಲ್ಲಿ ರಾಷ್ಟ್ರಗೀತೆಗೆ ಅವಕಾಶವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆಯನ್ನು ಹಾಡಬಾರೆಂದು ತಾಕೀತು ಮಾಡಿದ್ದಾನೆ. ಸ್ಥಳದಲ್ಲಿದ್ದ ವಿಜ್ಞಾನ ಶಿಕ್ಷಕ ಸುನಿಲ್ ಮಣಿ ತ್ರಿಪಾಟಿ ಎಂಬವರು ಅನ್ಸಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮಗುರುವಿನ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾಷ್ಟ್ರಗೀತೆ ಅಪಮಾನ ಮಾಡಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ಜುನೈದ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಈ ವೇಳೆ ಆತನಿಗೆ ಸಹಾಯಮಾಡಿದ ಇಬ್ಬರು ವ್ಯಕ್ತಿಗಳ ಹುಡುಕಾಟಕ್ಕೆ ವ್ಯಾಪಕ ಶೋಧ ನಡೆಸಿದ್ದಾರೆ.

ಕೊಲುಹಿ ಉಪ ಜಿಲ್ಲಾವರಿಷ್ಠಾಧಿಕಾರಿ ಅಶುತೋಷ್ ತ್ರಿಪಾಟಿ ಮಾತನಾಡಿ, ಉಮೇಶ್ ಯಾದವ್ ಎಂಬವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅನ್ಸಾರಿಯನ್ನು ಬಂಧಿಸಿದ್ದು, ಅಲ್ಲದೇ ಇನ್ನಿಬ್ಬರ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಅಲ್ಲದೇ ಅನ್ಸಾರಿಗೂ ಮದರಸಗೂ ಯಾವುದೇ ಸಂಬಂಧವಿಲ್ಲ. ಆತ ರಾಷ್ಟ್ರಗೀತೆ ಹಾಡುತ್ತಿರುವಾಗ ಏಕಾಏಕಿ ಬಂದು ತಡೆದಿದ್ದ ಎಂದು ಹೇಳಿದ್ದಾರೆ.

ಘಟನೆ ಕುರಿತು ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಯಾದ ಪ್ರಭಾತ್ ಕುಮಾರ್, ಅನ್ಸಾರಿಯವರಿಗೆ ಮದರಸದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಅವನು ರಾಷ್ಟ್ರಗೀತೆ ಹಾಡುವಾಗ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಅಡ್ಡಿಪಡಿಸಿದ್ದಾನೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *