ಲಕ್ನೋ: ಮದುವೆ ಮಂಟಪಕ್ಕೆ ಬರುತ್ತಿದ್ದ ವೇಳೆ ಮೂರ್ಛೆ ಬಿದ್ದ ವರನ ತಲೆಯಿಂದ ವಿಗ್ ಕೆಳಗೆ ಬಿದ್ದಿದ್ದನ್ನು ಕಂಡು ವಧು ಅಚ್ಚರಿ ಹಾಗೂ ಬೇಸರ ವ್ಯಕ್ತಪಡಿಸಿ ಮದುವೆಯನ್ನು ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ಮದುವೆ ಗಂಡು ತನ್ನದು ಬೋಳು ತಲೆ ಎಂಬ ವಿಷಯವನ್ನು ವಧುವಿನ ಕುಟುಂಬಸ್ಥರೊಂದಿಗೆ ಮುಚ್ಚಿಟ್ಟಿದ್ದಾನೆ. ಮದುವೆ ಆಗುವವರೆಗೆ ಈ ವಿಷಯ ಅವರಿಗೆ ತಿಳಿಯಬಾರದೆಂದು ಬಹಳ ಜಾಗರೂಕತೆಯಿಂದ ನಡೆದುಕೊಂಡಿದ್ದಾನೆ. ಆದರೆ ಮದುವೆ ದಿನವೇ ಆತನ ನಿಜ ರೂಪ ಬಯಲಾಗಿದೆ. ಇದನ್ನೂ ಓದಿ: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ – ಡಿಎಂಕೆ ಯುವ ನಾಯಕ ಅರೆಸ್ಟ್

ಮದುವೆ ದಿನ ಮಂಟಪಕ್ಕೆ ಬರುತ್ತಿದ್ದ ವೇಳೆ ವರ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಆತನ ತಲೆಯಲ್ಲಿದ್ದ ವಿಗ್ ಕಳಚಿ ಬಿದ್ದು, ಬೋಳು ತಲೆ ಕಾಣಿಸಿದೆ. ಇದರಿಂದ ವಧು ಹಾಗೂ ಆಕೆಯ ಕಡೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೋಳುತಲೆಯ ವರನನ್ನು ತಾನು ಮದುವೆಯಾಗುವುದಿಲ್ಲ ಎಂದು ವಧು ನಿರಾಕರಿಸಿದ್ದಾಳೆ. ಕೊನೆಗೆ ಮದುವೆ ನಿಂತು ಹೋಗಿದೆ.
ಮದುವೆಗಾಗಿ ವಧುವಿನ ಕಡೆಯವರು 5.66 ಲಕ್ಷ ಖರ್ಚು ಮಾಡಿದ್ದರು. ನಷ್ಟದ ಮೊತ್ತವನ್ನು ವರನ ಕುಟುಂಬದವರು ಹಿಂದಿರುಗಿಸಿ ಮದುಮಗಳಿಲ್ಲದೇ ಕಾನ್ಪುರಕ್ಕೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

ಗಂಡಿಗೆ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ಮದುವೆಗೂ ಮುನ್ನ ವರನ ಕುಟುಂಬದವರು ತಿಳಿಸಿದ್ದರೆ ನಾವು ಮದುವೆಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದೆವು. ನಮ್ಮ ಹೆಣ್ಣುಮಗಳನ್ನೂ ಒಪ್ಪಿಸುತ್ತಿದ್ದೆವು. ಆದರೆ ಅವರು ಸತ್ಯ ಮುಚ್ಚಿಟ್ಟು ಮದುವೆಯಾಗಲು ಮುಂದಾಗಿದ್ದು ಬೇಸರ ತರಿಸಿತು ಎಂದು ವಧುವಿನ ಚಿಕ್ಕಪ್ಪ ಮದುವೆ ನಿಂತ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Leave a Reply