ಸಿನಿಮಾ ರೀತಿಯಲ್ಲಿ ವರನ ಪಕ್ಕ ಕೂತಿದ್ದ ವಧುಗೆ ಬೈಕಿನಿಂದ ಬಂದು ಹೂ ಮಾಲೆ ಹಾಕ್ದ!

ಬಿಜ್ನಾರ್: ಬಾಲಿವುಡ್ ಸಿನಿಮಾದಲ್ಲಿ ಬರುವ ದೃಶ್ಯದ ಹಾಗೇ ಯುವಕನೊಬ್ಬ ಮದುವೆ ಮಂಟಕ್ಕೆ ಬೈಕ್ ನಲ್ಲಿ ಪ್ರವೇಶಿಸಿ ಮದುಮಗಳ ಕುತ್ತಿಗೆಗೆ ಹೂವಿನ ಹಾರ ಹಾಕಿರುವ ಘಟನೆ ಉತ್ತರ ಪ್ರದೇಶದ ಬಿಜ್ನಾರ್ ಪ್ರದೇಶದಲ್ಲಿ ನಡೆದಿದೆ.

 ಘಟನೆ ವೇಳೆ ಮದುವೆ ಮಂಟಪದಲ್ಲಿ ನೆರೆದಿದ್ದ ಎಲ್ಲರೂ ಕ್ಷಣಕಾಲ ಅಚ್ಚರಿಗೆ ಒಳಗಾಗಿದ್ದಾರೆ. ಬಳಿಕ ಹಸೆಮಣೆ ಮೇಲಿದ್ದ ಯುವತಿ ನೇರ ಯುವಕನ ಬಳಿ ಬಂದು ಹೂವಿನ ಹಾರ ಹಾಕಿದ್ದಾಳೆ. ಯುವಕನ ಈ ಸಾಹಸದ ಬಳಿಕ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. ಇದರಿಂದ ಕೋಪಗೊಂಡ ವಧುವಿನ ಕಡೆಯ ಪೋಷಕರು ಯುವಕನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಂದಹಾಗೇ ಘಟನೆಯಲ್ಲಿ ಯುವಕ ಹಾಗೂ ವಧು ಇಬ್ಬರು ಒಂದೇ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಬೇರೆ ಬೇರೆ ಜಾತಿಗೆ ಸೇರಿದ ಕಾರಣ ಇಬ್ಬರ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಯುವತಿಯ ಪೋಷಕರು ಮತ್ತೊಬ್ಬ ಯುವಕನೊಂದಿಗೆ ಮದುವೆಗೆ ಮಾಡಲು ತಯಾರಿ ನಡೆಸಿದ್ದರು. ಯುವತಿಯ ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದ್ದ ಯುವಕ ಈ ಸಾಹಸಕ್ಕೆ ಕೈ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *