ಲಸಿಕೆ ಹಾಕಿಸಿಕೊಳ್ಳದೇ ಹೊರಗಡೆ ಓಡಾಡಿದ್ರೆ ಅರೆಸ್ಟ್‌!

ಮನಿಲಾ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ವಿಶ್ವದೆಲ್ಲೆಡೆ ಕೋವಿಡ್‌ ಲಸಿಕೆ ಅಭಿಯಾನಗಳು ನಡೆಯುತ್ತಿವೆ. ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ನಾನಾ ದೇಶಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಅಂತೆಯೇ ಫಿಲಿಪೈನ್ಸ್‌ ರಾಷ್ಟ್ರ ಕೂಡ ತನ್ನ ನಾಗರಿಕರು ಕೊರೊನಾ ಲಸಿಕೆ ಪಡೆಯುವಂತೆ ತಿಳಿಸಿ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೊಳಿಸಿದೆ.

ಕೋವಿಡ್‌ ಲಸಿಕೆ ಪಡೆಯದವರು ಮನೆಯಿಂದ ಹೊರಗಡೆ ಬರುವಂತಿಲ್ಲ. ಒಂದು ವೇಳೆ ಹೊರಗಡೆ ಓಡಾಡಿದರೆ ಅಂತಹವರನ್ನು ಬಂಧಿಸಲಾಗುವುದು ಎಂದು ಫಿಲಿಪೈನ್ಸ್‌ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಲು ಬಿಡಲ್ಲ – ಮಕ್ಕಳನ್ನೇ ಕಿಡ್ನ್ಯಾಪ್‌ಗೈದ ತಾಯಿ ವಿರುದ್ಧ ಮಾಜಿ ಪತಿ ದೂರು

ಕೋವಿಡ್‌ ಲಸಿಕೆ ಪಡೆಯದವರು ಮನೆಯಲ್ಲಿಯೇ ಇದ್ದಾರಾ ಎಂಬ ಬಗ್ಗೆ ಸಮುದಾಯ ನಾಯಕರು ಗಮನಹರಿಸಬೇಕು. ಯಾರಾದರೂ ಮನೆಯಲ್ಲಿರಲು ನಿರಾಕರಿಸಿ ಹೊರಗಡೆ ಓಡಾಡುತ್ತಿದ್ದರೆ ಅಂತಹವರನ್ನು ಬಂಧಿಸಿ ಎಂದು ಸೂಚನೆ ನೀಡಿದ್ದಾರೆ.

ದೇಶದ ಜನತೆಯ ಆರೋಗ್ಯದ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿ ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ – ನಟಿ ಸಾವಿನ ಬಗ್ಗೆ ಅನುಮಾನ

ಕಳೆದ ವರ್ಷದ ಕೊನೆ ವೇಳೆಗೆ ದೇಶದಲ್ಲಿ 4.9 ಕೋಟಿ ಮಂದಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.45 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆಯದವರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಫಿಲಿಪೈನ್ಸ್‌ನಲ್ಲಿ ಇಲ್ಲಿಯವರೆಗೆ 43 ಓಮಿಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಮುಂದಾಗಿದೆ.

Comments

Leave a Reply

Your email address will not be published. Required fields are marked *