ಬೆಂಗ್ಳೂರಲ್ಲಿ ಮಳೆಯ ಸಿಂಚನ- ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ

ಬೆಂಗಳೂರು: ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣದಿಂದ ಪರಿಣಾಮ ಇಂದು ನಗರದಲ್ಲಿ ತುಂತುರು ಮಳೆ ಆಗಿದೆ. ಅನಿರೀಕ್ಷಿತವಾಗಿ ಮಳೆ ಆಗಮನಿಂದ ವಿಕೆಂಡ್ ಮಸ್ತಿಯಲ್ಲಿದ್ದ ಜನರಿಗೆ ಕಿರಿಕಿರಿ ಉಂಟಾಗಿದೆ. ನಗರದ ರಾಜ್‍ಕುಮಾರ್ ಸಮಾಧಿ ರಸ್ತೆ, ಎಂಜಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಂಗಳೂರಿನ ಯಶವಂತಪುರ, ಮತ್ತಿಕೆರೆ, ಕೆ ಆರ್ ಸರ್ಕಲ್, ಎಂಜಿ ರೋಡಲ್ಲಿ ಮಳೆಯಾಗುತ್ತಿದ್ದು, ನಾಗರಭಾವಿ, ಚಂದ್ರಾಲೇಔಟ್, ಉಳ್ಳಾಲ್ ಸೇರಿದಂತೆ ಇತರೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ.

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮಳೆಯಾಗುತ್ತಿದ್ದು,  ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *