ಅಫ್ಘಾನಿಸ್ತಾನದಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಸಿದ್ಧ: ಜೋಶಿ

ಹುಬ್ಬಳ್ಳಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ಕೈವಶ ಮಾಡಿಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲಿನ ಭಾರತೀಯ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪಾಲಿಕೆ ಚುನಾವಣೆ ಕುರಿತು ನಗರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯ ನಂತರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯರ ರಕ್ಷಣೆಯ ಪ್ರಯತ್ನದಲ್ಲಿದ್ದೇವೆ. ಅಲ್ಲಿಯ ಜನರ ಜೀವನ ಕಾಪಾಡುವುದು ಅತ್ಯವಶ್ಯಕವಿದೆ. ಅಮೆರಿಕ ಸರ್ಕಾರ ಜನರ ರಕ್ಷಣೆ ಬಗ್ಗೆ ಖಾಳಜಿ ತೋರಬೇಕು ಎಂದಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗುವುದು. ವಾರ್ಡ್ ಅಧ್ಯಕ್ಷರ ಮೂಲಕ ಬರುವ ಆಕಾಂಕ್ಷಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಆಕಾಂಕ್ಷಿಗಳು ಇಂದು ಸಂಜೆಯೊಳಗೆ ಅರ್ಜಿಗಳನ್ನು ವಾರ್ಡ್ ಅಧ್ಯಕ್ಷರಿಗೆ ಸಲ್ಲಿಸಬೇಕು. ವಾರ್ಡ್ ಅಧ್ಯಕ್ಷರು ಆ ಅರ್ಜಿಗಳನ್ನು ಮಂಡಲ ಅಧ್ಯಕ್ಷರಿಗೆ ನೀಡಬೇಕು. ಅವರು ಅರ್ಜಿಗಳನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡಿದ ನಂತರ ನಾಡಿದ್ದು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

Comments

Leave a Reply

Your email address will not be published. Required fields are marked *