ಕೇಂದ್ರ ಸಚಿವ ಅಮಿತ್ ಶಾ ಭೇಟಿ ಮಾಡಿದ ರಾಮ್ ಚರಣ್, ಚಿರಂಜೀವಿ

ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಬಂದ ಬೆನ್ನಲ್ಲೇ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿದ್ದಾರೆ ನಟರಾದ ರಾಮ್ ಚರಣ್ (Ram Charan) ಹಾಗೂ ಚಿರಂಜೀವಿ (Chiranjeevi). ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ರಾಜಕೀಯ ಉದ್ದೇಶದಿಂದ ಕೂಡಿದ ಭೇಟಿಯಾಗಿದೆಯಾ ಅಥವಾ ಆಸ್ಕರ್ ಪ್ರಶಸ್ತಿ ಪಡೆದದಕ್ಕೆ ಅಭಿನಂದಿಸಲು ಕರೆದ ಭೇಟಿನಾ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದೆ.

ಆಸ್ಕರ್ ಪ್ರಶಸ್ತಿ ಪಡೆದದ್ದಕ್ಕಾಗಿ ಅಭಿನಂದಿಸಲು ಅಮಿತ್ ಶಾ ಕರೆದಿದ್ದರೆ ಇಡೀ ತಂಡವನ್ನು ಕರೆಯಿಸಿಕೊಳ್ಳಬೇಕಿತ್ತು. ಅಲ್ಲದೇ, ಚಿರಂಜೀವಿಗೂ ಮತ್ತು ಆರ್.ಆರ್.ಆರ್ ಸಿನಿಮಾಗೂ ಸಂಬಂಧವಿಲ್ಲ. ಹಾಗಾಗಿ ಇದು ರಾಜಕೀಯ ಪ್ರೇರಿತ ಭೇಟಿ ಎಂದು ಬಣ್ಣಿಸಲಾಗುತ್ತಿದೆ. ಚುನಾವಣೆಯನ್ನು ಆಧಾರವಾಗಿಟ್ಟುಕೊಂಡು ತಂದೆ ಮಗನನ್ನು ಅಮಿತ್ ಶಾ ಕರೆದಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

ಭೇಟಿಯ ನಂತರ ಅಮಿತ್ ಶಾ ಟ್ವೀಟ್ ಮಾಡಿದ್ದು, ‘ತೆಲುಗು ಸಿನಿಮಾ ರಂಗದ ಇಬ್ಬರು ಲೆಜೆಂಡ್ ಗಳಾದ ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಜೊತೆ ಮೀಟಿಂಗ್ ಮಾಡಿದೆ. ಸಿನಿಮಾ ರಂಗದ ಬಗ್ಗೆ ಮಾತನಾಡಿದೆ. ಆರ್.ಆರ್.ಆರ್ ಸಿನಿಮಾದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ.

ಅಮಿತ್ ಶಾ ಮಾಡಿರುವ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿರುವ ರಾಮ್ ಚರಣ್ ‘ಗೃಹಸಚಿವರನ್ನು ಭೇಟಿ ಮಾಡಿದ್ದು ಸಂತಸವಾಗಿದೆ. ಸಿನಿಮಾ ತಂಡದ ಪ್ರಯತ್ನ ಮೆಚ್ಚಿ ಮತ್ತಷ್ಟು ಸಿನಿಮಾಗಳನ್ನು ಮಾಡಲು ಉತ್ಸಾಹ ತುಂಬಿದ್ದಕ್ಕೆ ಧನ್ಯವಾಗಳು’ ಎಂದು ಬರೆದುಕೊಂಡಿದ್ದಾರೆ ರಾಮ್ ಚರಣ್.

Comments

Leave a Reply

Your email address will not be published. Required fields are marked *