ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

ನವದೆಹಲಿ: ಭಾರತವೂ ಈಗ ಅಧಿಕೃತವಾಗಿ ಕ್ರಿಪ್ಟೋ ಕರೆನ್ಸಿಗೆ ಎಂಟ್ರಿಕೊಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ (Union Budget 2022) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಡಿಜಿಟಲ್‌ ರುಪಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.

ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್‌ಬಿಐ 2022-23ನೇ ಹಣಕಾಸು ವರ್ಷದಲ್ಲಿ ಡಿಜಿಟಲ್ ರೂಪಾಯಿಯನ್ನು ನೀಡಲಿದೆ. ಇದರಿಂದ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇದರ ಜೊತೆ ಕ್ರಿಪ್ಟೋ ಮೇಲಿನ ಆದಾಯಕ್ಕೆ 30% ತೆರಿಗೆ ವಿಧಿಸಿದ್ದಾರೆ. ಇದರಿಂದಾಗಿ ಕ್ರಿಪ್ಟೋಗೆ ಭಾರತದಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ. ವಿಶ್ವದ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರತದವರೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಭಾರತದ ನಿಲುವು ಏನು ಎನ್ನುವ ಕುತೂಹಲ ಇತ್ತು. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

ಬೆಂಗಳೂರಿನ ಶ್ರೀಕೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರಿಂದ ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳನ್ನು ಸರ್ಕಾರ ನಿಷೇಧ ಮಾಡುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಸರ್ಕಾರ ಮಸೂದೆ ಮಂಡನೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರಲಿದೆ ಎಂಬ ಸುದ್ದಿಯೂ ಪ್ರಕಟವಾಗಿತ್ತು. ಈಗ ಕೇಂದ್ರ ಸರ್ಕಾರವೇ ಡಿಜಿಟಲ್‌ ಕರೆನ್ಸಿ ತರುವುದಾಗಿ ಘೋಷಣೆ ಮಾಡಿ ಎಲ್ಲ ಗೊಂದಲಗಳಿಗೆ ಬ್ರೇಕ್‌ ಹಾಕಿದೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

Comments

Leave a Reply

Your email address will not be published. Required fields are marked *