ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸುವವರಿಗೆ ಇನ್ಮುಂದೆ ರಾಯಲ್ ಟ್ರೀಟ್ಮೆಂಟ್ ಸಿಗಲಿದೆ. ಯೂನಿಫಾರ್ಮ್ ಹಾಕಿಕೊಂಡು ಭೋಜನ ಶಾಲೆಯ ಸಿಬ್ಬಂದಿ ಊಟ ಬಡಿಸಲಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ದಿನನಿತ್ಯ ಇಲ್ಲಿ ಸಾವಿರಾರು ಜನ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ವರಮಾನ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಲ್ಲೂರು ದೇವಳದ ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ.

ದೇವಸ್ಥಾನದ ಭೋಜನ ಶಾಲೆಯಲ್ಲಿ ಅನ್ನ ಪ್ರಸಾದ ವಿತರಣೆ ವೇಳೆ ಸಿಬ್ಬಂದಿ ಸಮವಸ್ತ್ರ ತೊಟ್ಟು ಭಕ್ತರಿಗೆ ಇನ್ನು ಮಂದೆ ಊಟ ಬಡಿಸಲಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಕೊಲ್ಲೂರು ದೇವಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಶಿಸ್ತು ಇರಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಶುಚಿತ್ವ ಕಾಪಾಡುವ ಉದ್ದೇಶದಿಂದ ಈ ಸಮವಸ್ತ್ರ ಜಾರಿ ಗೊಳಿಸಿರುವುದಾಗಿ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಸಿದ್ಧ ದೇವಸ್ಥಾನದಲ್ಲಿ ಸಮವಸ್ತ್ರ ಜಾರಿಯಾಗಬೇಕು ಎಂಬ ಬೇಡಿಕೆಯೂ ಇದೆ. ಶುಚಿತ್ವ ಮತ್ತು ಗೌರವದ ಸಂಕೇತವಾಗಿ ಈ ಸಮವಸ್ತ್ರವನ್ನು ದೇವಸ್ಥಾನ ಜಾರಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply