ಮೋದಿ ನೇತೃತ್ವದಲ್ಲಿ ಬಿಜೆಪಿಯು ಬಡವರ, ದಲಿತರ ಪಕ್ಷವಾಗಿ ಮಾರ್ಪಟ್ಟಿದೆ: ಜೆಪಿ ನಡ್ಡಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯು ಬಡವರು, ಹಿಂದುಳಿದವರು, ದಲಿತರು ಮತ್ತು ಸಮಾಜದ ದೀನದಲಿತರ ಪಕ್ಷವಾಗಿ ಹೊರಹೊಮ್ಮಿದೆ. ಇದುವರೆಗೆ ಯಾರೂ ಹಿಂದುಳಿದವರ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಉಪಚುನಾವಣೆ ನಡೆಯಲಿರುವ ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತನಾಡಿದ ಅವರು, ಇಂದು ಮೋದಿ ಸರ್ಕಾರದ ಯೋಜನೆಗಳ ಲಾಭಗಳು ಬೀದಿ ಬದಿ ವ್ಯಾಪಾರಿಗಳು, ಚಾಲಕರು ಮತ್ತು ರಿಕ್ಷಾ ಚಾಲಕರಿಗೆ ತಲುಪುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

ಪಕ್ಷದ ಸಂಸ್ಥಾಪಕರಿಗೆ ನಮನ ಸಲ್ಲಿಸಿದ ನಡ್ಡಾ, ಬಿಜೆಪಿ 12 ರಾಜ್ಯಗಳಲ್ಲಿ ಸ್ವಂತ ಬಲದಿಂದ ಸರ್ಕಾರ ರಚಿಸಿದ್ದು, ಇನ್ನು ಕೆಲವೆಡೆ ಎನ್‍ಡಿಎ ಅಧಿಕಾರದಲ್ಲಿದೆ ಎಂದರು. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

ಹಮ್ ದೋ ಹಮಾರೇ ದೋ ಅಂತ ಹೇಳುವ ಕಾಲವೊಂದಿತ್ತು. ಆದರೆ ಈಗ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬೆಳೆದಿದ್ದೇವೆ. ಅನೇಕ ರಾಜ್ಯಗಳಲ್ಲಿ ನಾವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ರಾಜವಂಶದ ಪಕ್ಷಗಳ ವಿರುದ್ಧ ಹೋರಾಡುವ ವಿರೋಧ ಪಕ್ಷದಲ್ಲಿದ್ದೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು.

ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಎಎಪಿ ಶಾಸಕ ರಾಘವ್ ಚಡ್ಡಾ ರಾಜೀನಾಮೆ ನೀಡಿದ್ದರಿಂದ ರಾಜೇಂದ್ರ ನಗರ ಕ್ಷೇತ್ರ ತೆರವಾಗಿದೆ.

Comments

Leave a Reply

Your email address will not be published. Required fields are marked *