7 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ – ಮದುವೆಗೆ ಹೊರಟಿದ್ದವರು ಗ್ರೇಟ್‌ ಎಸ್ಕೇಪ್‌!

ಹೈದರಾಬಾದ್‌: ತೆಲಂಗಾಣದ (Telangana Bridge) ಪೆದ್ದಪಲ್ಲಿ ಜಿಲ್ಲೆಯ ಮನೈರ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಸೇತುವೆಯ ಒಂದು ಭಾಗ ಸೋಮವಾರ ಮಧ್ಯರಾತ್ರಿ ಕುಸಿದಿದೆ.

ಜೋರಾಗಿ ಬೀಸಿದ ಗಾಳಿಗೆ ಸೇತುವೆಯ ಎರಡು ಸಿಮೆಂಟ್ ಗರ್ಡರ್‌ಗಳು ಬಿದ್ದಿವೆ. ತಡರಾತ್ರಿ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮದುವೆಗೆ ಹೊರಡುತ್ತಿದ್ದ ಬಸ್‌ನಲ್ಲಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ಬಸ್‌ ಪ್ರಯಾಣಿಸಿದ ಸ್ವಲ್ಪ ಹೊತ್ತಲ್ಲೇ ಸೇತುವೆ ಕುಸಿದು ಬಿದ್ದಿದೆ. ಇದನ್ನೂ ಓದಿ: ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

2016 ರಲ್ಲಿ ಶಂಕುಸ್ಥಾಪನೆಗೊಂಡು ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ಸೇತುವೆಯ ಅಂದಾಜು ವೆಚ್ಚ 46 ಕೋಟಿ ರೂ.. ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಎಂಟು ವರ್ಷ ಕಳೆದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶಗೊಂಡ ಸ್ಥಳೀಯರು ತಿಳಿಸಿದ್ದಾರೆ.

ಭೂಪಾಲಪಲ್ಲಿಯ ಟೇಕುಮಟ್ಲ ಮಂಡಲದ ಗರ್ಮಿಲ್ಲಪಲ್ಲು ಮತ್ತು ಪೆದ್ದಪಲ್ಲಿಯ ಒಡೆಡೆಡುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಮಂಥನಿ, ಪರಕಲ್ ಮತ್ತು ಜಮ್ಮುಕುಂಟಾ ಪಟ್ಟಣಗಳ ನಡುವಿನ ಅಂತರವನ್ನು 50 ಕಿ.ಮೀಗಳಷ್ಟು ಕಡಿಮೆ ಮಾಡಲಿದೆ. ಇದನ್ನೂ ಓದಿ: ಅಪ್ಪ-ಮಕ್ಕಳ ಕುತಂತ್ರದಿಂದ ಉಚ್ಚಾಟನೆ, ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ: ಈಶ್ವರಪ್ಪ