ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಇಲ್ಲ:  ಉಮೇಶ್ ಕತ್ತಿ

ಚಿಕ್ಕೋಡಿ: ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಇಲ್ಲ. ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

BJP - CONGRESS

ಪರಿಷತ್ ಚುನಾವಣೆ ಹಿನ್ನೆಲೆ ಹುಕ್ಕೇರಿ ಪುರಸಭೆ ಕಾರ್ಯಾಲಯದಲ್ಲಿ ಉಮೇಶ್ ಕತ್ತಿ ಮತಚಲಾಯಿಸಿದರು. ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿ, ಪ್ರಥಮ ಪ್ರಾಶಸ್ತ್ಯದ ಮತವನ್ನ ಬಿಜೆಪಿಗೆ ನೀಡಿ, ಎರಡನೇ ಪ್ರಾಶಸ್ತ್ಯ ಮತವನ್ನ ನಿಮಗೆ ತಿಳಿದವರಿಗೆ ನೀಡಿ, ಎನ್ನುವ ಸೂಚನೆಯನ್ನ ಮತದಾರರಿಗೆ ನೀಡಿದ್ದೇನೆ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಆಯ್ಕೆ ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಹಿನ್ನೆಡೆ ಆಗುವದಿಲ್ಲ, ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ಯಾರು ಅನ್ನೋದು ಗೊತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಂತೆ ಮಹಾಂತೇಶ ಕವಟಗಿಮಠ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹುಕ್ಕೇರಿ ಪುರಸಭೆಯ ಸದಸ್ಯರು, ಬಿಜೆಪಿ ಮುಂಖಡ ಗುರುರಾಜ್ ಸೇರಿದಂತೆ ಹುಕ್ಕೇರಿ ತಾಲೂಕು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ:  ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

Comments

Leave a Reply

Your email address will not be published. Required fields are marked *