ಝೆಲೆನ್‍ಸ್ಕಿ ಹತ್ಯೆಯಾದರೂ ಹೋರಾಟ ನಿಲ್ಲುವುದಿಲ್ಲ- ಉಕ್ರೇನ್ ಪ್ಲ್ಯಾನ್ ಏನು ಗೊತ್ತಾ?

ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮಂದುವರಿಸಿದೆ. ಅಲ್ಲಿನ ಜನರ ಪರಿಸ್ಥಿತಿ ಘನಘೋರವಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಹತ್ಯೆಗೆ ರಷ್ಯಾ ಈಗಾಗಲೇ ಹಲವು ಬಾರಿ ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಉಕ್ರೇನ್ ಅಡಳಿತ, ಒಂದು ವೇಳೆ ಅಧ್ಯಕ್ಷ ಝೆಲೆನ್‍ಸ್ಕಿ ಹತ್ಯೆಯಾದರೂ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸಿದ್ಧತೆ ಮಾಡಿಕೊಂಡಿದೆ.

ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಅವರು, ರಷ್ಯಾ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿ, ಝೆಲೆನ್‍ಸ್ಕಿ ಹತ್ಯೆಯಾದರೂ ಉಕ್ರೇನ್ ತನ್ನ ಹೋರಾಟ ನಿಲ್ಲಿಸುವುದಿಲ್ಲ. ಝೆಲೆನ್‍ಸ್ಕಿ ಅಧಿಕಾರದಲ್ಲಿದ್ದಾಗ ಹೇಗೆ ಆಡಳಿತ ನಡೆಯುತ್ತಿದೆಯೋ ನಂತರವೂ ಹೆಚ್ಚೂ ಕಡಿಮೆ ಅದೇ ರೀತಿ ಮುಂದುವರಿಸಲು ಅವರು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಕ್ರೇನ್‍ನ ಧೈರ್ಯಶಾಲಿ ಜನರ ನಿಜವಾದ ಪ್ರತಿನಿಧಿಗಳಾಗಿ ಝೆಲೆನ್‍ಸ್ಕಿ ಮತ್ತು ಅವರ ಸರ್ಕಾರ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ ಏರಿಕೆ

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ 12 ದಿನಗಳಲ್ಲಿ ಅಧ್ಯಕ್ಷ ಝೆಲೆನ್‍ಸ್ಕಿ ಹತ್ಯೆಗೆ ಈವರೆಗೆ ಮೂರು ಬಾರಿ ರಷ್ಯಾ ಪ್ರಯತ್ನಿಸಿದೆ. ಉಕ್ರೇನ್ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆ ಸಕಾಲದಲ್ಲಿ ಮುನ್ಸೂಚನೆ ನೀಡಿದ್ದರಿಂದ ಈ ಸಂಚುಗಳನ್ನು ವಿಫಲಗೊಳಿಸಲಾಯಿತು. ವಾಗ್‍ನರ್ ಗ್ರೂಪ್ ಮತ್ತು ಚೆಚೆನ್ಯಾ ಬಂಡುಕೋರರ ಎರಡು ಪ್ರತ್ಯೇಕ ಗುಂಪುಗಳನ್ನು ಉಕ್ರೇನ್ ಅಧ್ಯಕ್ಷರ ಹತ್ಯೆಗೆಂದು ಕಳಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಉಕ್ರೇನ್‍ಗೆ ಬಂದಿರುವ ರಷ್ಯಾ ಸೇನೆಯು ಉದ್ದೇಶಪೂರ್ವಕವಾಗಿ ಜನರನ್ನು ಕೊಲ್ಲುತ್ತಿದೆ. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ನೂರಾರು ಜನರು ಮೃತಪಟ್ಟಿದ್ದಾರೆ. ಯಾವುದನ್ನೂ ಮರೆಯುವುದಿಲ್ಲ, ಯಾರನ್ನೂ ಕ್ಷಮಿಸುವುದಿಲ್ಲ. ನಮ್ಮ ನೆಲಕ್ಕೆ ಬಂದು ನಮ್ಮ ಮೇಲೆ ದೌರ್ಜನ್ಯ ಎಸಗಿದ ಎಲ್ಲರನ್ನೂ ಶಿಕ್ಷಿಸುತ್ತೇ ಎಂದು ಝೆಲೆನ್‍ಸ್ಕಿ ಹೇಳಿದ್ದರು

Comments

Leave a Reply

Your email address will not be published. Required fields are marked *