ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

ಕಿವ್: ರಷ್ಯಾ ದಾಳಿಯ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ಎಲ್ಲಾ ನಾಗರಿಕರಿಗೆ ಸರ್ಕಾರ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾ ದಾಳಿ ಬಗ್ಗೆ ಇನ್ನೂ ತಮ್ಮ ಆತ್ಮ ಸಾಕ್ಷಿಯನ್ನು ಕಳೆದುಕೊಳ್ಳದ ಎಲ್ಲರಿಗೂ ರಷ್ಯಾ ವಿರುದ್ಧ ಪ್ರತಿಭಟಿಸುವ ಸಮಯ ಬಂದಿದೆ. ದೇಶವನ್ನು ರಕ್ಷಿಸಲು ಸಿದ್ಧರಾಗಿರುವ ಉಕ್ರೇನ್‍ನ ಎಲ್ಲಾ ನಾಗರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದೇವೆ ಹಾಗೂ ಎಲ್ಲಾ ನಿರ್ಬಂಧವನ್ನು ತೆಗೆದು ಹಾಕುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ

ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಈಗಾಗಲೇ ಯುದ್ಧ ಸಾರಿದ್ದು, ಭಾರತೀಯ ಕಾಲಮಾನ ಇಂದು ಬೆಳಗ್ಗೆ 6 ಗಂಟೆಗೆ ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವಿಚಾರವಾಗಿ ಇತರ ಯಾವುದೇ ರಾಷ್ಟ್ರಗಳು ಮೂಗು ತೂರಿಸದಂತೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?

ಉಕ್ರೇನ್‍ನಲ್ಲಿ ಇದೀಗ ರಷ್ಯಾ ದಾಳಿಗೆ ಜನರು ಬಲಿಯಾಗುತ್ತಿದ್ದು, ಕಾರ್ನಾಟಕ-ಭಾರತ ಸೇರಿದಂತೆ ಇತರ ದೇಶದ ವಿದ್ಯಾರ್ಥಿಗಳೂ ಸಿಲುಕಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *