ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಶಾಸಕರೊಬ್ಬರು ಶನಿವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಫೋನ್‌ನಲ್ಲಿ 2 ಬಾರಿ ಅಶ್ಲೀಲ ವೀಡಿಯೋಗಳನ್ನು (ಪೋರ್ನ್) ನೋಡಿದ್ದೇನೆ ಎಂದು ಒಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ.
ಶಾಸಕ ನೀಲ್ ಪ್ಯಾರಿಶ್ ಸಂಸತ್ತಿನಲ್ಲಿ ಪೋರ್ನ್ ವೀಕ್ಷಣೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಅವರನ್ನು ಶುಕ್ರವಾರ ಅಮಾನತುಗೊಳಿಸಲಾಗಿತ್ತು. ಬಳಿಕ ಶನಿವಾರ ತಮ್ಮ ತಪ್ಪನ್ನು ಒಪ್ಪಿಕೊಂಡ ನೀಲ್ ಪ್ಯಾರಿಶ್ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಮಾರುವ ಪಾನೀಯಗಳಲ್ಲಿ ದುರ್ಬಲಕಾರಕ ಔಷಧಿಯ ಅಂಶವಿರುತ್ತೆ: ಕಾಂಗ್ರೆಸ್ ಮಾಜಿ ನಾಯಕ

ತನ್ನ ತಪ್ಪನ್ನು ಒಪ್ಪಿಕೊಂಡ ಪ್ಯಾರಿಶ್, ಮೊದಲ ಬಾರಿಗೆ ವೀಕ್ಷಿಸಿದಾಗ ಅದು ತಮ್ಮ ಫೋನಿನಲ್ಲಿ ಆಕಸ್ಮಿಕವಾಗಿ ತೆರೆದುಕೊಂಡಿತ್ತು. ಆದರೆ ಎರಡನೇ ಬಾರಿ ನಾನು ಉದ್ದೇಶಪೂರ್ವಕವಾಗಿ ನೋಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಇನ್ನೊಬ್ಬಳನ್ನು ಮನೆಗೆ ಕರೆತರಲು ಯಾವ ಮುಸ್ಲಿಂ ಮಹಿಳೆಯೂ ಬಯಸಲ್ಲ: ಅಸ್ಸಾಂ ಸಿಎಂ
ನಾನು ಮಾಡಿರುವುದು ಅತ್ಯಂತ ದೊಡ್ಡ ಅಪರಾಧ. ಅದು ನನ್ನ ಹುಚ್ಚುತನದ ಕ್ಷಣವಾಗಿತ್ತು. ನಾನು ಮಾಡಿರುವ ಕೃತ್ಯದ ಬಗ್ಗೆ ನನಗೆ ಹೆಮ್ಮೆ ಇಲ್ಲ. ನನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ನಾನು ಬಯಸುವುದಿಲ್ಲ. ಇದರಲ್ಲಿ ಸಂಪೂರ್ಣ ತಪ್ಪಿರುವುದರಿಂದ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

Leave a Reply